ಪಾಕ್ ಮುಖವಾಡ ಬಯಲು; ನಿಷೇಧಿತ ಜಿಹಾದಿ ಸಂಘಟನೆಯಿಂದ ಕಾಶ್ಮೀರದಲ್ಲಿ ನಿಧಿ ಸಂಗ್ರಹ!

ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ ಎಂಬ ಮಾತುಗಳನ್ನು ತಿರಸ್ಕರಿಸಿ, ತಾವು ಭಯೋತ್ಪಾದಕ ವಿರೋಧಿಗಳೆಂದು ಪಾಕಿಸ್ತಾನ ಎಷ್ಟೇ ಹೇಳಿದರೂ ಒಂದಲ್ಲ ಒಂದು ರೀತಿ ಪಾಕಿಸ್ತಾನದ...
ನಿಷೇಧಿತ ಜಿಹಾದಿ ಸಂಘಟನೆಯಿಂದ ಕಾಶ್ಮೀರದಲ್ಲಿ ನಿಧಿ ಸಂಗ್ರಹ
ನಿಷೇಧಿತ ಜಿಹಾದಿ ಸಂಘಟನೆಯಿಂದ ಕಾಶ್ಮೀರದಲ್ಲಿ ನಿಧಿ ಸಂಗ್ರಹ

ಕರಾಚಿ: ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ ಎಂಬ ಮಾತುಗಳನ್ನು ತಿರಸ್ಕರಿಸಿ, ತಾವು ಭಯೋತ್ಪಾದಕ ವಿರೋಧಿಗಳೆಂದು ಪಾಕಿಸ್ತಾನ ಎಷ್ಟೇ ಹೇಳಿದರೂ ಒಂದಲ್ಲ ಒಂದು ರೀತಿ ಪಾಕಿಸ್ತಾನದ ಮುಖವಾಡ ಬಯಲಾಗುತ್ತಲೇ ಬಂದಿದೆ.

ಇದೀಗ ಇದೇ ಸಾಲಿಗೆ ಪಾಕಿಸ್ತಾನದ ಮತ್ತೊಂದು ಮುಖವಾಡ ಬಯಲಾಗಿದ್ದು, ನಿಷೇಧಿತ ಜಿಹಾದಿ ಸಂಘಟನೆಯಿಂದ ಜಿಹಾದಿಗಳಿಗಾಗಿ ಕಾಶ್ಮೀರದಲ್ಲಿ ನಿಧಿ ಸಂಗ್ರಹ ಮಾಡುತ್ತಿರುವುದು ಬಹಿರಂಗಗೊಂಡಿದೆ.

ಈ ಕುರಿತ ವಿಡಿಯೋವೊಂದು ಇದೀಗ ಬಯಲಾಗಿದೆ. ಭಯೋತ್ಪಾದಕ ಸಂಘಟನೆಯಾಗಿರುವ ಜಿಹಾದಿ ಗುಂಪನ್ನು ಪಾಕಿಸ್ತಾನದಲ್ಲಿ ನಿಷೇಧ ಹೇರಲಾಗಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಈ ಹಿಂದೆ ಘೋಷಣೆ ಮಾಡಿದ್ದರು. ಆದರೆ. ಇದೀಗ ನಿಷೇಧಿತ ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತರು ಬಹಿರಂಗವಾಗಿಯೇ ರಮ್ಜಾನ್ ಚಾರಿಟಿ ಎಂಬ ಹೆಸರಿನಲ್ಲಿ ನಿಧಿ ಸಂಗ್ರಹ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ವಿಡಿಯೋದಲ್ಲಿರುವ ಪ್ರಕಾರ, ಇಬ್ಬರು-ಮೂವರು ಜನರಿರುವ ಗುಂಪೊಂದು ತಾವು ಜಿಹಾದಿ ಬೆಂಬಲಿಗರು ಎಂದು ಹೇಳಿಕೊಂಡಿದ್ದು, ಬಹಿರಂಗವಾಗಿಯೇ ನಿಧಿ ಸಂಗ್ರಹ ಮಾಡುತ್ತಿರುವುದು ಕಂಡು ಬಂದಿದೆ. ನಿಮ್ಮ ಅತ್ಯಮೂಲ್ಯ ಹಣವನ್ನು ದೇಣಿಗೆ ನೀಡುವ ಮೂಲಕ ಮುಜಾಹಿದ್ದೀನ್ ಸಹೋದರರಾಗಿ ಎಂದು ಹೇಳಿ ಗುಂಪೊಂದು ನಿಧಿ ಸಂಗ್ರಹಿಸುತ್ತಿದೆ. ಪ್ರತೀ ಬಾರಿಗೆ ದೇಣಿಗೆ ಕೇಳುವಾಗಲೆಲ್ಲಾ ಜಿಹಾದಿ ಹೆಸರು ಕೇಳಿಬರುತ್ತಿರುವುದು ವಿಡಿಯೋದಲ್ಲಿ ಬಹಿರಂಗಗೊಂಡಿದೆ

ಭಯೋತ್ಪಾದನೆ ವಿರುದ್ಧ ಕ್ರಮಕೈಗೊಳ್ಳುವಂತೆ ಭಾರತ ಆಗ್ರಹಿಸಿದ್ದಾಗಲೆಲ್ಲಾ ಪಾಕಿಸ್ತಾನ ಸುಳ್ಳು ಹೇಳಿ ಎಂದಿನಂತೆ ತನ್ನ ಚಟುವಟಿಕೆಗಳನ್ನು ಮುಂದುವರೆಸುತ್ತಿರುವುದು ಈ ವಿಡಿಯೋ ಮೂಲಕ ಬಹಿರಂಗಗೊಂಡಿದೆ.

ಕರಾಚಿಯಲ್ಲಿ ರಾಜಕೀಯ ಬೆಂಬಲಿತ ಸಂಘಟನೆಯಾಗಿಗಳಾಗಿರುವ ಮುತ್ತಾಹಿದಾ ಕ್ವಾಮಿ ಮೂವ್ಮೆಂಟ್, ಜೈಶ್-ಇ-ಮೊಹಮ್ಮದ್ ಮತ್ತು ಇತರೆ ಉಗ್ರರ ಸಂಘಟನೆಗಳು ಸ್ವತಂತ್ರವಾಗಿ ತನ್ನ ಚಟುವಟಿಕೆಗಳನ್ನು ನಡೆಸುತ್ತಿರುವುದಾಗಿ ಹೇಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿತ್ತು. ಈ ಬೆನ್ನಲ್ಲೇ ಇಂತಹದ್ದೊಂದು ಬೆಳವಣಿಗೆ ಕಂಡುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com