ಸ್ವಿಸ್ ಬ್ಯಾಂಕ್​ನಲ್ಲಿ ಕಪ್ಪುಹಣ: 75ನೇ ಸ್ಥಾನಕ್ಕೆ ಕುಸಿದ ಭಾರತ

ತೆರಿಗೆ ವಂಚಿಸಿ ಅಕ್ರಮವಾಗಿ ಭಾರೀ ಸಂಪತ್ತನ್ನು ಸ್ವಿಸ್ ಬ್ಯಾಂಕ್ ನಲ್ಲಿಡುವ ಭಾರತೀಯ ಶ್ರೀಮಂತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ತೆರಿಗೆ ವಂಚಿಸಿ ಅಕ್ರಮವಾಗಿ ಭಾರೀ ಸಂಪತ್ತನ್ನು ಸ್ವಿಸ್ ಬ್ಯಾಂಕ್ ನಲ್ಲಿಡುವ ಭಾರತೀಯ ಶ್ರೀಮಂತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಇದರ ಪರಿಣಾಮವಾಗಿ ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪು ಹೊಂದಿರುವ ದೇಶಗಳ ಪೈಕಿ ಭಾರತ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಕದ್ದು-ಮುಚ್ಚಿ ಕೋಟಿ ಗಟ್ಟಲೆ ಹಣವನ್ನು ಸ್ವಿಸ್ ಬ್ಯಾಂಕ್​ಗೆ ಜಮೆ ಮಾಡಿದವರಲ್ಲಿ ಗ್ರೇಟ್ ಬ್ರಿಟನ್(ಯು.ಕೆ.) ಪ್ರಥಮ ಸ್ಥಾನದಲ್ಲಿದೆ. ಅಮೆರಿಕ ದ್ವಿತೀಯ ಸ್ಥಾನ. ವೆಸ್ಟ್ ಇಂಡೀಸ್, ಜರ್ಮನಿ, ಫ್ರಾನ್ಸ್​ಗಳಿಗೆ ನಂತರದ ಸ್ಥಾನ ಪಡೆದರೆ, ಪಾಕ್​ಗೆ 69ನೇ ಸ್ಥಾನ ಪಡೆದಿದೆ. ಇನ್ನೂ ಭಾರತ 75ನೇ ಸ್ಥಾನಕ್ಕೆ ಕುಸಿದಿದೆ.
ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣ ಇಡುವ ಸ್ಥಾನದಲ್ಲಿ ನಮ್ಮ ದೇಶ 2004ರಲ್ಲಿ 37 ನೇ ಸ್ಥಾನದಲ್ಲಿತ್ತು. ಅದು ಕಳೆದ ವರ್ಷ 61ಕ್ಕೆ ಇಳಿಯಿತು. ಸ್ವಿಸ್ ನ್ಯಾಷನಲ್ ಬ್ಯಾಂಕ್ ನೀಡಿರುವ ಇತ್ತೀಚಿನ ಅಂಕಿ ಅಂಶದ ಪ್ರಕಾರ ವಿಶ್ವದ ಬೇರೆ ಬೇರೆ ರಾಷ್ಟ್ರದ ಜನ ಅಲ್ಲಿ ಇಟ್ಟಿರುವ ಒಟ್ಟು ಹಣ 1.42 ಟ್ರಿಲಿಯನ್ ಸ್ವಿಸ್​ಫ್ರಾನ್ಸ್. (ಅಂದರೆ 98 ಲಕ್ಷ ಕೋಟಿ ರೂ.). ಜಗತ್ತಿನ ಒಟ್ಟೂ ಹಣದ ಶೇ. 25 ಭಾಗ ಸ್ವಿಸ್ ಬ್ಯಾಂಕಿನಲ್ಲೇ ಇದೆ. ಇದರಲ್ಲಿ ಗ್ರೇಟ್ ಬ್ರಿಟನ್ ಪಾಲು ಶೇ. 14. ಭಾರತೀಯ ಗಣ್ಯಮಾನ್ಯರು ಶೇ. 0.1 ರಷ್ಟು (ಅಂದರೆ 8,392 ಕೋಟಿ ರೂ.) ಜಮಾ ಮಾಡಿದ್ದಾರೆ.
ಅನ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತಕ್ಕೆ ಕಡೆಯ ಸ್ಥಾನವಂತೆ. ಭಾರತದಲ್ಲಿ ಭ್ರಷ್ಟಾಚಾರಿಗಳು ಅತಿಯಾಗಿದ್ದಾರೆ ಎಂಬ ಆರೋಪ ಇದ್ದರೂ ಕಳ್ಳ ಮಾರ್ಗದಲ್ಲಿ ಸ್ವಿಸ್ ಖಾತೆಗೆ ಜಮಾ ಮಾಡುವಲ್ಲಿ ಕೊನೆಯ ಸ್ಥಾನ ಪಡೆದಿದೆ ಎಂದು ತೃಪ್ತಿ ಪಟ್ಟುಕೊಳ್ಳಬಹುದಷ್ಟೇ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com