ಹೈದರಾಬಾದ್: ಹೈದರಾಬಾದ್ ನ ಓಲ್ಡ್ ಸಿಟಿಯ ವಿವಿಧ ಕಡೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದು, 17 ಸಜೀವ ಗುಂಡು, ಎರಡು ಕಂಪ್ಯೂಟರ್ ಹಾಗೂ ಎರಡು ಸ್ಕ್ಯಾನರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ವಾರ ಬಂಧಿತ ಶಂಕಿತ ಐಎಸ್ಐಎಸ್ ಉಗ್ರರು ನೀಡಿದ ಮಾಹಿತಿಯನ್ನು ಆಧರಿಸಿ ಎನ್ಐಎ ಅಧಿಕಾರಿಗಳು ಇಂದು ಬೆಳಗ್ಗೆಯಿಂದ ಮೂರು ಕಡೆ ದಾಳಿ ನಡೆಸಿದ್ದಾರೆ. ರಂಜಾನ್ ದಿನ ದಾಳಿ ಉಗ್ರರು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಕಳೆದ ಜೂನ್ 29ರಂದು ಓರ್ವ ಟೆಕ್ಕಿ ಸೇರಿದಂತೆ 11 ಶಂಕಿತ ಉಗ್ರರನ್ನು ಎನ್ಐಎ ಅಧಿಕಾರಿಗಳು ಹೈದರಾಬಾದ್ ನಲ್ಲಿ ಬಂಧಿಸಿದ್ದರು.
ಶಂಕಿತ ಐಎಸ್ಐಎಸ್ ಉಗ್ರರು ಓಲ್ಡ್ ಸಿಟಿಯ ವಿವಿಧ ಕಡೆ ದಾಳಿ ನಡೆಸಲು ರೂಪಿಸಿದ್ದ ಸಂಚನ್ನು ವಿಫಲಗೊಳಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿಕೊಂಡಿದೆ.