ಸ್ವಾತಿ ಕೊಲೆ ಪ್ರಕರಣ: ಆರೋಪಿ ಜಾಮೀನು ಅರ್ಜಿ ವಿಜಾರಣೆ ಜು.15ಕ್ಕೆ ಮುಂದೂಡಿಕೆ

ಸಾಫ್ಟ್ ವೇರ್ ಇಂಜಿನಿಯರ್ ಸ್ವಾತಿ ಬರ್ಬರ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಆರೋಪಿ ರಾಮ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಚೆನ್ನೈ ಹೈ ಕೋರ್ಟ್ ಜುಲೈ.15ಕ್ಕೆ...
ಕೊಲೆಯಾದ ಸ್ವಾತಿ (ಸಂಗ್ರಹ ಚಿತ್ರ)
ಕೊಲೆಯಾದ ಸ್ವಾತಿ (ಸಂಗ್ರಹ ಚಿತ್ರ)

ಚೆನ್ನೈ: ಸಾಫ್ಟ್ ವೇರ್ ಇಂಜಿನಿಯರ್ ಸ್ವಾತಿ ಬರ್ಬರ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಆರೋಪಿ ರಾಮ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಚೆನ್ನೈ ಹೈ ಕೋರ್ಟ್ ಜುಲೈ.15ಕ್ಕೆ ಮುಂದೂಡಿದೆ.

ಪೊಲೀಸರು ಇಲ್ಲಸಲ್ಲದ ಆರೋಪ ಮಾಡಿ ಪ್ರಕರಣದಲ್ಲಿ ರಾಮ್ ಕುಮಾರ್ ಅವರನ್ನು ಸಿಕ್ಕಿಸಿದ್ದಾರೆ ಎಂದು ಆರೋಪಿಸಿರುವ ಆರೋಪಿ ಪರ ವಕೀಲರು ರಾಮ್ ಕುಮಾರ್ ಗೆ ಜಾಮೀನು ನೀಡಬೇಕೆಂದು ಹೇಳಿ ಅರ್ಜಿಯೊಂದನ್ನು ದಾಖಲಿಸಿದ್ದರು.

ರಾಮ್ ಕುಮಾರ್ ಸ್ವಾತಿಯನ್ನು ಹತ್ಯೆ ಮಾಡಿಲ್ಲ. ಕೊಲ್ಲುವ ಪ್ರಯತ್ನವನ್ನೂ ಮಾಡಿಲ್ಲ. ಪೊಲೀಸರೊಂದಿಗೆ ಕೈಜೋಡಿಸಿದ್ದ ವ್ಯಕ್ತಿಗಳು ಬ್ಲೇಡ್ ನಲ್ಲಿ ಆತನ ಮೇಲೆ ಹಲ್ಲೆ ನಡೆಸಿ, ಅದಕ್ಕೆ ಆತ್ಮಹತ್ಯೆಯೆಂಬ ಬಣ್ಣವನ್ನು ನೀಡಿದ್ದಾರೆಂದು ರಾಮ್ ಕುಮಾರ್ ಹೇಳಿಕೊಂಡಿದ್ದಾರೆ. ರಾಮ್ ಕುಮಾರ್ ಕುತ್ತಿಗೆಯಲ್ಲಿ ಗಾಯವಾಗಲು ಪೊಲೀಸರೇ ನೇರ ಕಾರಣರಾಗಿದ್ದಾರೆಂದು ಆರೋಪಿ ಪರ ವಕೀಲ ಕೃಷ್ಣಮೂರ್ತಿಯವರು ಅರ್ಜಿಯಲ್ಲಿ ಹೇಳಿದ್ದರು.

ಇದರಂತೆ ಅರ್ಜಿಯನ್ನು ಇಂದು ಪರಿಶೀಲನೆ ನಡೆಸಿರುವ ನ್ಯಾಯಾಲಯವು ಈ ಕುರಿತ ವಿಚಾರಣೆಯನ್ನು ಜುಲೈ.15ಕ್ಕೆ ಮುಂದೂಡಿದೆ.

ಈ ಮಧ್ಯೆ ಸಿಟಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೋಪಿನಾಥ್ ಅವರು ರಾಮ್ ಕುಮಾರ್ ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿದ್ದು, ಆರೋಪಿಯ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com