ಶಾಂತಿಯ ಸಂಕೇತವಾದ ಸ್ವಸ್ತಿಕ್ ಚಿಹ್ನೆ 11 ಸಾವಿರದಷ್ಟು ಪುರಾತನವಾದದ್ದು: ಸಂಶೋಧನೆ

ಶಾಂತಿಯ ಸಂಕೇತವಾದ ಸ್ವಸ್ತಿಕ್ ಚಿಹ್ನೆ ಸುಮಾರು 11 ಸಾವಿರ ವರ್ಷಗಳಷ್ಟು ಪುರಾತನವಾದದ್ದು ಎಂದು ಸಂಶೋಧಕರು ತಿಳಿಸಿರುವುದಾಗಿ ಖಾಸಗಿ ಪತ್ರಿಕೆಯೊಂದು...
ಸ್ವಸ್ತಿಕ್
ಸ್ವಸ್ತಿಕ್

ಖರಗಪುರ್: ಶಾಂತಿಯ ಸಂಕೇತವಾದ ಸ್ವಸ್ತಿಕ್ ಚಿಹ್ನೆ ಸುಮಾರು 11 ಸಾವಿರ ವರ್ಷಗಳಷ್ಟು ಪುರಾತನವಾದದ್ದು ಎಂದು ಸಂಶೋಧಕರು ತಿಳಿಸಿರುವುದಾಗಿ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.

ಸ್ವಸ್ತಿಕ್ ಚಿಹ್ನೆ ಆರ್ಯ ಸಂಸ್ಕೃತಿಗಿಂತಲೂ ಮೊದಲು ಇತ್ತು ಎಂದು ದೇಶದ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಪ್ರಮುಖ ಸಂಶೋಧಕರ ಅಧ್ಯಯನದಿಂದ ತಿಳಿದುಬಂದಿದೆ. ನಂತರ ಸ್ವಸ್ತಿಕ್ ಚಿಹ್ನೆ ಪಶ್ಚಿಮ ಹಾಗೂ ಮಧ್ಯಪ್ರಾಚ್ಯ ನಾಗರಿಕೆಯಲ್ಲೂ ಬಳಕೆಯಾಗ ತೊಡಗಿತ್ತು ಎನ್ನಲಾಗಿದೆ.

ಈ ಮಧ್ಯೆ ಉಕ್ರೇನಿಯನ್ ರ ಸ್ವಸ್ತಿಕ್ ಚಿಹ್ನೆ ಸುಮಾರು 12 ಸಾವಿರ ವರ್ಷಗಳಷ್ಟು ಪುರಾತನವಾದದ್ದು ಎಂಬ ವಾದವನ್ನು ಅಲ್ಲಗೆಳೆದಿದ್ದಾರೆ.

ಭಾರತೀಯ ಸಾಂಸ್ಕೃತಿಕ ವ್ಯವಹಾರಗಳ ಮಂಡಳಿಯಲ್ಲಿ ಸಂಶೋಧಕರ ತಂಡ ಸ್ವಸ್ತಿಕ್ ಚಿಹ್ನೆಗೆ ಸಂಬಂಧಿಸಿದ ಕುತೂಹಲಕಾರಿ ಹಾಗೂ ಇನ್ನಿತರ ವಿಷಯಗಳನ್ನು ಜುಲೈ 8ರಂದು ಬಹಿರಂಗಪಡಿಸಲಿದೆಯಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com