ಚೀನಾದಲ್ಲೂ ಆರಂಭವಾಗಲಿದೆ ಅಮ್ಮಾ ಕ್ಯಾಂಟೀನ್

ತಮಿಳುನಾಡು ಸರ್ಕಾರದ ಪ್ರಸಿದ್ಧ ಯೋಜನೆಯಾದ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲೇ ನೈಋತ್ಯ ಚೀನಾದಲ್ಲಿ ಕ್ಯಾಂಟೀನ್ ಆರಂಭಿಸಲು ಚೀನಾ ನಿರ್ಧರಿಸಿದೆ...
ಅಮ್ಮಾ ಕ್ಯಾಂಟೀನ್
ಅಮ್ಮಾ ಕ್ಯಾಂಟೀನ್

ಚೆನ್ನೈ: ತಮಿಳುನಾಡು ಸರ್ಕಾರದ ಪ್ರಸಿದ್ಧ ಯೋಜನೆಯಾದ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲೇ  ನೈಋತ್ಯ ಚೀನಾದಲ್ಲಿ ಕ್ಯಾಂಟೀನ್ ಆರಂಭಿಸಲು ಚೀನಾ ನಿರ್ಧರಿಸಿದೆ.

ಭಾರತದ ಹಲವು ಜನಪ್ರಿಯ ಯೋಜನೆಗಳನ್ನು ಚೀನಾ ಸರ್ಕಾರ ಅಲ್ಲಿ ಅನುಷ್ಠಾನಗೊಳಿಸುವ ಸಂಬಂಧ 2015 ರ ಮೇ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದ ಮೂರು ದಿನಗಳ ಪ್ರವಾಸದ ವೇಳೆ ಒಪ್ಪಂದಕ್ಕೆ ಮೋದಿ ಸಹಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಚೆನ್ನೈಗೆ ಆಗಮಿಸಿರುವ ಚೀನಾ ನಿಯೋಗದ ಜೊತೆ ನಗರ ಮೇಯರ್ ಸೈದಾಯಿ ದೊರೆಸ್ವಾಮಿ ಸಭೆ ನಡೆಸಿ, ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಚೆನ್ನೈ ಮಹಾನಗರ ಪಾಲಿಕೆ ಜಾರಿಗೆ ತಂದಿರುವ ಹಲವು ಜನಪರ ಯೋಜನೆಗಳಲ್ಲಿ ಪ್ರಸಿದ್ಧವಾಗಿರುವ ಅಮ್ಮಾ ಕ್ಯಾಂಟೀನ್ ಬಗ್ಗೆ ಚೀನಿ ನಿಯೋಗ ಪ್ರಭಾವಿತಗೊಂಡಿದ್ದು, ಚೀನಾದ ಚಾಂಗ್ ಕಿಂಗ್ ನಗರದಲ್ಲೂ ಅಮ್ಮಾ ಕ್ಯಾಂಟಿನ್ ತೆರೆಯಲು ಆಸಕ್ತಿ ತೋರಿದೆ.

ಚೆನ್ನೈ ಮತ್ತು ಚಾಂಗ್ ಕಿಂಗ್ ಮಹಾ ನಗರ ಪಾಲಿಕೆಗಳು ಕೈಗೊಂಡಿರುವ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದಾಗಿ ಭಾರತ ಮತ್ತು ಚೀನಾ ವಿದೇಶಾಂಗ ವ್ಯವಹಾರಗಳ ಇಲಾಖೆಗಳು ಘೋಷಿಸಿದ್ದವು.

ಅದರಂತೆ ಸಂಪನ್ಮೂಲ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ,  ಶಿಕ್ಷಣ, ನಗರ ಯೋಜನೆ ವ್ಯಾಪಾರ ಸುಧಾರಣೆ ಸಂಬಂಧ ಚರ್ಚೆ ನಡೆದಿತ್ತು.

ಆರ್ಥಿಕವಾಗಿ ಬಲಹೀನರಾಗಿರುವ ಜನರಿಗೆ ಪೌಷ್ಠಿಕ ಆಹಾರ ನೀಡುವುದು ಅಮ್ಮಾ ಕ್ಯಾಂಟಿನ್ ಉದ್ದೇಶವಾಗಿದ್ದು, 2013 ರಲ್ಲಿ ಇದಕ್ಕೆ ಚಾಲನೆ ನೀಡಲಾಯಿತು.

ತಮಿಳುನಾಡಿನಾದ್ಯಂತ ಸುಮಾರು 500 ಅಮ್ಮಾ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿವೆ. ಈ ಕ್ಯಾಂಟೀನ್ ನಲ್ಲಿ 1 ರೂಪಾಯಿಗೆ ಪೊಂಗಲ್, ಮತ್ತು ಇಡ್ಲಿ ನೀಡಲಾಗುತ್ತದೆ.  ಅನ್ನ ಸಾರು, ಕರಿಬೇವಿನ ಎಲೆ ರೈಸ್, ಮತ್ತು ಚಪಾತಿಗೆ  ಮೂರು ರುಪಾಯಿ ಮಾತ್ರ ಹಣ ತೆಗೆದುಕೊಳ್ಳಲಾಗುತ್ತದೆ.

ತಮಿಳುನಾಡು ಸರ್ಕಾರದ ಈ ಯೋಜನೆ ಪ್ರಭಾವದಿಂದ ನೆರೆಯ ಆಂಧ್ರ ಪ್ರದೇಶ ಸರ್ಕಾರ ಕೂಡ ಈ ಯೋಜೆನ ಜಾರಿಗೆ ತಂದಿದೆ. ಚೆನ್ನೈನಲ್ಲಿ ಮತ್ತೆ 107 ಅಮ್ಮಾ ಕ್ಯಾಂಟೀನ್ ತೆರೆಯಲು ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com