ಕ್ಲಾಸ್ ರೂಂಗೆ ಮೊಬೈಲ್ ತಂದ್ರೆ ಮೊಬೈಲ್ ಜಪ್ತಿ, 10 ಸಾವಿರ ದಂಡ

ಅಣ್ಣಾ ವಿಶ್ವವಿದ್ಯಾಲಯದಲ್ಲಿ ಮೊಬೈಲ್ ನಿಷೇಧದ ನಡುವೆಯೂ ಅಕ್ರಮವಾಗಿ ಕ್ಲಾಸ್ ರೂಂಗೆ ವಿದ್ಯಾರ್ಥಿಗಳು ಮೊಬೈಲ್ ತೆಗೆದುಕೊಂಡು ಹೋದರೆ ಮೊಬೈಲ್ ಜತೆಗೆ 10 ಸಾವಿರ...
ಮೊಬೈಲ್
ಮೊಬೈಲ್

ಚೆನ್ನೈ: ಅಣ್ಣಾ ವಿಶ್ವವಿದ್ಯಾಲಯದಲ್ಲಿ ಮೊಬೈಲ್ ನಿಷೇಧದ ನಡುವೆಯೂ ಅಕ್ರಮವಾಗಿ ಕ್ಲಾಸ್ ರೂಂಗೆ ವಿದ್ಯಾರ್ಥಿಗಳು ಮೊಬೈಲ್ ತೆಗೆದುಕೊಂಡು ಹೋದರೆ ಮೊಬೈಲ್ ಜತೆಗೆ 10 ಸಾವಿರ ದಂಡ ವಿಧಿಸಲಾಗುತ್ತಿದೆ.

ಅಣ್ಣ ವಿಶ್ವವಿದ್ಯಾಲಯದ ಗಿಂಡಿ ಇಂಜಿನಿಯರಿಂಗ್ ಕಾಲೇಜು ನಲ್ಲಿ ಕಾಸ್ಲ್ ರೂಂ, ಲ್ಯಾಬ್ ಹಾಗೂ ಶಾಲಾ ಕಚೇರಿಯಲ್ಲಿ ಮೊಬೈಲ್ ನಿಷೇಧಿಸಲಾಗಿದ್ದು ಒಂದು ವೇಳೆ ವಿದ್ಯಾರ್ಥಿಗಳು ಮೊಬೈಲ್ ತಂದಿದ್ದೆ ಆದರೆ ಮೊಬೈಲ್, ಸಿಮ್ ಕಾರ್ಡ್ ಜಪ್ತಿ ಮಾಡಿ, 10 ಸಾವಿರ ದಂಡ ವಿಧಿಸಲಾಗುತ್ತದೆ ಎಂಬ ಸೂಚನ ಫಲಕಗಳನ್ನು ಹಾಕಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೊದಲ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ, ಶಾಲಾ ಆಡಳಿತ ಮಂಡಳಿ ಮೊಬೈಲ್ ಬಳಕೆ ನಿಷೇಧಿಸಿದ್ದು, ಅಕ್ರಮವಾಗಿ ಮೊಬೈಲ್ ಅನ್ನು ಕಾಲೇಜಿಗೆ ತಂದರೆ ಮೊಬೈಲ್ ಜತೆಗೆ ಸಿಮ್ ಕಾರ್ಡ್ ಅನ್ನು ಜಪ್ತಿ ಮಾಡಿ ನಾಲ್ಕು ವರ್ಷಗಳ ನಂತರ ಮೊಬೈಲ್ ಹಿಂದಿರುಗಿಸುವುದಾಗಿ ಹೇಳಿರುವುದಾಗಿ ವಿದ್ಯಾರ್ಥಿ ತಿಳಿಸಿದ್ದಾನೆ.

2015ರಲ್ಲಿ ವಿಶ್ವವಿದ್ಯಾಲಯ ಮೊಬೈಲ್ ನಿಷೇಧ ಆದೇಶವನ್ನು ಹೊರಡಿಸಿತ್ತು. ಇದಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಸ್ಟೆಲ್ ಹಾಗ ಕ್ಲಾಸ್ ರೂಂ ಹೊರಗಡೆ ಬಳಕೆಗೆ ಅವಕಾಶ ನೀಡಿತ್ತು.

ಕ್ಲಾಸ್ ರೂಂಗೆ ಮೊಬೈಲ್ ತರದಂತೆ ಸೂಚಿಸಿರುವ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com