ಮೊಹಲ್ಲಾ ಸಲಹೆಗಾರ್ತಿ ಸ್ಥಾನಕ್ಕೆ ದೆಹಲಿ ಆರೋಗ್ಯ ಸಚಿವರ ಪುತ್ರಿ ರಾಜಿನಾಮೆ

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಪುತ್ರಿ ಸೌಮ್ಯಾ ಜೈನ್ ಅವರು ಮೊಹಲ್ಲಾ ಸಲಹೆಗಾರ ಸ್ಥಾನಕ್ಕೆ ಗುರುವಾರ ರಾಜಿನಾಮೆ ಸಲ್ಲಿಸಿದ್ದಾರೆ...
ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್
ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್

ನವದೆಹಲಿ: ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಪುತ್ರಿ ಸೌಮ್ಯಾ ಜೈನ್ ಅವರು ಮೊಹಲ್ಲಾ ಸಲಹೆಗಾರ್ತಿ ಸ್ಥಾನಕ್ಕೆ ಗುರುವಾರ ರಾಜಿನಾಮೆ ಸಲ್ಲಿಸಿದ್ದಾರೆ.

ಸೌಮ್ಯ ಜೈನ್ ಅವರು ವಾಸ್ತು ಶಿಲ್ಪ ಶಾಸ್ತ್ರದಲ್ಲಿ ಪದವಿಯನ್ನು ಪಡೆದಿದ್ದು, ವೈದ್ಯಕೀಯ ಕ್ಷೇತ್ರ, ಜನಾರೋಗ್ಯ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರಲಿಲ್ಲ. ಹೀಗಿದ್ದರೂ, ಅರವಿಂದ ಕೇಜ್ರಿವಾಲ್ ಅವರು ಸೌಮ್ಯಾ ಅವರಿಗೆ ದೆಹಲಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಮೊಹಲ್ಲಾ ಅಥವಾ ವಸತಿ ಬಡಾವಣೆಗಳ ಆಸ್ಪತ್ರೆಗಳ ಉಸ್ತುವಾರಿಯನ್ನು ನೋಡಿಕೊಳ್ಳುವ ಸ್ಥಾನವನ್ನು ನೀಡಲಾಗಿದ್ದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನವನ್ನು ಸೆಳೆದಿರುವ ಮೊಹಲ್ಲಾ ಅಸ್ಪತ್ರೆ ಸ್ಥಾಪನೆ ಯೋಜನೆಯಲ್ಲಿ ಆಪ್ ಸರ್ಕಾರ ಈ ರೀತಿಯ ನಿರ್ಧಾರ ತೆಗೆದುಕೊಂಡಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸೌಮ್ಯ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಈ ಕುರಿತಂತೆ ಮಾತನಾಡಿರುವ ಸತ್ಯೇಂದರ್ ಜೈನ್ ಅವರು, ಕೆಲವರ ವಿರೋಧದ ಮಾತಿನಿಂದ ನೊಂದು ಸೌಮ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನನ್ನ ಮಗಳು ವಾಸ್ತುಶಿಲ್ಪ ಶಾಸ್ತ್ರದಲ್ಲಿ ಅನುಭವವನ್ನು ಹೊಂದಿದ್ದಾಳೆ. ಮೊಹಲ್ಲಾ ಆಸ್ಪತ್ರೆಗಳ ವಿನ್ಯಾಸಕ್ಕೆ ಸಹಾಯ ಮಾಡುತ್ತಿದ್ದಳು. ಆದರೆ, ಸರ್ಕಾರದಿಂದ ಯಾವುದೇ ಸೌಲಭ್ಯವಾಗಲೀ, ವೇತನವನ್ನಾಗಲಿ ಪಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com