
ಪಾಟ್ನ: ಕಠಿಣ ನಿಲುವು ತೆಗೆದುಕೊಂಡು ಬಿಹಾರ ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ರನ್ನು ಅವರದ್ದೇ ಪಕ್ಷದ ಶಾಸರೊಬ್ಬರು ಮುಜುಗರಕ್ಕೊಳಗಾಗುವಂತೆ ಮಾಡಿದ್ದಾರೆ.
ಕುಡಿದ ಅಮಲಿನಲ್ಲಿದ್ದ ಜೆಡಿಯು ಶಾಸಕರೊಬ್ಬರು ಬಾರ್ ಹುಡುಗಿಯರ ಜೊತೆ ಅಶ್ಲೀಲವಾಗಿ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.
ವಿಡಿಯೋ ಕುರಿತಂತೆ ಕೆಲ ಮಾಧ್ಯಮಗಳು ವರದಿ ಮಾಡಿದೆ. ವಿಡಿಯೋದಲ್ಲಿ ಕಂಡು ಬಂದಿರುವ ಪ್ರಕಾರ, ಬಾರ್ ಹುಡುಗಿಯರ ಜೊತೆ ಡ್ಯಾನ್ಸ್ ಮಾಡಿರುವುದು ಜೆಡಿಯು ಶಾಸಕ ಶ್ಯಾಮ್ ಬಹದ್ದೂರ್ ಸಿಂಗ್ ಎಂದು ಹೇಳಲಾಗುತ್ತಿದೆ. ಡ್ಯಾನ್ಸ್ ಮಾಡುವಾಗ ಶಾಸಕ ಕೆಲ ಅಶ್ಲೀಲವಾಗಿ ಸ್ಟೆಪ್ ಹಾಕಿದ್ದು, ಕುಡಿದ ಅಮಲಿನಲ್ಲಿರುವುದು ಎದ್ದು ಕಾಣುತ್ತಿದೆ.
ಬಿಹಾರ ರಾಜ್ಯದಲ್ಲಿ ಈಗಾಗಲೇ ಮದ್ಯ ನಿಷೇಧ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದ ನಿತೀಶ್ ಕುಮಾರ್ ಅವರು, ಇದೀಗ ಅವರ ಪಕ್ಷದ ಶಾಸಕರೊಬ್ಬರು ಈ ರೀತಿಯಾಗಿ ಕುಡಿದು ಬಾರ್ ಗರ್ಲ್ಸ್ ಜೊತೆ ಡ್ಯಾನ್ಸ್ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ.
Advertisement