ದೆಹಲಿಯಲ್ಲಿ 10 ವರ್ಷದಷ್ಟು ಹಳೆಯ ಡೀಸೆಲ್ ವಾಹನಗಳ ನೋಂದಣಿ ರದ್ದು ಮಾಡಲು ಎನ್'ಜಿಟಿ ಆದೇಶ

ರಾಜಧಾನಿ ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳ ನೋಂದಣಿಯನ್ನು ತ್ವರಿಗತಿಯಲ್ಲಿ ರದ್ದು ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ಸೋಮವಾರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಜಧಾನಿ ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳ ನೋಂದಣಿಯನ್ನು  ತ್ವರಿಗತಿಯಲ್ಲಿ ರದ್ದು ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ಸೋಮವಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ದೆಹಲಿಯಲ್ಲಿ ವಾಯು ಮಾಲಿನ್ಯ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಈ ಆದೇಶವನ್ನು ನೀಡಿದ್ದು, ನೋಂದಣಿ ರದ್ದು ಪಡಿಸಲಾದ ಎಲ್ಲಾ ವಾಹನಗಳ ಪಟ್ಟಿಯನ್ನು ಆರ್ ಟಿಒ ದೆಹಲಿ ಸಂಚಾರಿ ಪೊಲೀಸರಿಗೆ ಒದಗಿಸುವಂತೆ ದೆಹಲಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಆದೇಶ ನೀಡಿದೆ.

ಅಲ್ಲದೆ, ರಸ್ತೆಗಳಲ್ಲಿ ಕಸಕ್ಕೆ ಬೆಂಕಿ ಹಾಕಿ ವಾಯುಮಾಲಿನ್ಯ ಸೃಷ್ಟಿಸುತ್ತಿರುವ ಪ್ರಕರಣಗಳ ಕುರಿತಂತೆ ಕೆಲ ಸಂಬಂಧಿತ ಇಲಾಖೆಗಳು ಕೂಡ ವರದಿ ಸಲ್ಲಿಸುವಂತೆ ತಿಳಿಸಿದೆ.

ಈ ಹಿಂದೆಯಷ್ಟೇ ಹಸಿರು ಪೀಠ 10 ವರ್ಷಗಳಿಗಿಂತಲೂ ಹಳೆಯ ವಾಹನಗಳ ಮೇಲೆ ನಿಷೇಧ ಹೇರಿತ್ತು. ಇಂದು ನಡೆದ ವಿಚಾರಣೆ ವೇಳೆ ದೆಹಲಿ ಸಾರಿಗೆ ಇಲಾಖೆ ಕೆಲ ವರದಿಗಳನ್ನು ಸಲ್ಲಿಸಿದ್ದು, ಕಳೆದ 1 ವರ್ಷದಲ್ಲಿ ಆದೇಶದಂತೆಯೇ 10 ವರ್ಷಗಳಿಗಿಂತಲೂ ಹಳೆಯದಾದ 3,000 ಡೀಸೆಲ್ ಕಾರುಗಳನ್ನು ಹಾಗೂ 15 ವರ್ಷಗಳಿಗಿಂತಲೂ ಹಳೆಯದಾದ ಪೆಟ್ರೋಲ್ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com