ಆದರ್ಶ್ ಸೊಸೈಟಿ ಅಪಾರ್ಟ್ಮೆಂಟ್ ಕಟ್ಟಡ ನೆಲಸಮ ಬೇಡ: ಸುಪ್ರೀಂ ತೀರ್ಪು

ರಾಜಕೀಯ ಭ್ರಷ್ಟಾಚಾರಾದ ಸಂಕೇತವಾಗಿರುವ ಮುಂಬಯಿನ ಆದರ್ಶ ಹೌಸಿಂಗ್ ಸೊಸೈಟಿ ಅಪಾರ್ಟ್ ಮೆಂಟ್ ಅನ್ನು ನೆಲಸಮ ಮಾಡದಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಆದರ್ಶ್ ಹೌಸಿಂಗ್ ಸೊಸೈಟಿ
ಆದರ್ಶ್ ಹೌಸಿಂಗ್ ಸೊಸೈಟಿ

ನವದೆಹಲಿ: ರಾಜಕೀಯ ಭ್ರಷ್ಟಾಚಾರಾದ ಸಂಕೇತವಾಗಿರುವ ಮುಂಬಯಿನ ಆದರ್ಶ ಹೌಸಿಂಗ್ ಸೊಸೈಟಿ ಕಟ್ಟಡವನ್ನು ನೆಲಸಮ ಮಾಡದಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ..

ಈ ಸಂಬಂಧ ಆದೇಶ ನೀಡಿರುವ ಸುಪ್ರೀಂಕೋರ್ಟ್ ಕಟ್ಟಡವನ್ನು ಕೇಂದ್ರ ಸರ್ಕಾರದ ಸುಪರ್ದಿಗೆ ನೀಡುವಂತೆ ಸೂಚಿಸಿದೆ.

ಯುದ್ಧದಲ್ಲಿ ಭಾಗಿಯಾದವರಿಗೆ ಹಾಗೂ ಮಡಿದ ಯೋಧರಿಗೆ ನೀಡಲು ದಕ್ಷಿಣ ಮುಂಬಯಿಯ ಕೊಲಾಬದಲ್ಲಿ 31 ಅಂತಸ್ತಿನ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಲಾಗದಿತ್ತು, ಆದರೆ ಯೋಧರುಗಳಿಗೆ ಫ್ಲ್ಯಾಟ್ ಗಳನ್ನು ಹಂಚು ಬದಲು ರಾಜಕಾರಣಿಗಳು, ರಕ್ಷಣಾ ಅಧಿಕಾರಿಗಳು ಹಾಗೂ ಹಾಗೂ ಅಧಿಕಾರಿಗಳು ಕಬಳಿಸಿದ್ದರು.

ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಆದರ್ಶ್ ಹೌಸಿಂಗ್ ಸೊಸೈಟಿಯ ಅಪಾರ್ಟ್ ಮೆಂಟ್ ಅನ್ನು ನೆಲಸಮ ಗೊಳಿಸುವಂತೆ ಬಾಂಬೆ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಆದರ್ಶ್ ಹೌಸಿಂಗ್ ಸೊಸೈಟಿ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನೆಲಸಮಗೊಳಿಸದಂತೆ ಆದೇಶಿಸಿದೆ.

2010 ರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಅಶೋಕ್ ಚೌಹಾಣ್ ಅವರ ಮೂವರು ಸಂಬಂಧಿಗಳಿಗೆ ಈ ಅಪಾರ್ಟ್ ಮೆಂಟ್ ನಲ್ಲಿ 3 ಫ್ಲ್ಯಾಟ್ ಗಳನ್ನು ನೀಡಲಾಗಿತ್ತು. ಇದು ಬಹಿರಂಗವಾದ ನಂತರ ಬಲವಂತವಾಗಿ ಅಶೋಕ್ ಚೌಹಾಣ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಯುತ್ತಿದ್ದು, ಹಗರಣ ಬೆಳಕಿಗೆ ಬಂದ ಮೇಲೆ  ಹಲವಾರು ಮಾಲೀಕರು ತಮ್ಮ ಫ್ಲ್ಯಾಟ್ ಗಳನ್ನು ಬಿಟ್ಟು ತೊರೆದಿದ್ದಾರೆ. 2013 ರಲ್ಲಿ ನೇಮಕವಾದ ನ್ಯಾಯಾಂಗ ಆಯೋಗ ಪ್ರಕರಣದ ತನಿಖೆ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com