
ಶ್ರೀನಗರ: ಭದ್ರತ ಪಡೆ ಮತ್ತು ಉಗ್ರನ ನಡುವೆ ನಡೆದ ಗುಂಡಿನ ಕಾಳಗದ ನಂತರ ಬಾರತೀಯ ಸೈನಿಕು ಲಾಹೋರ್ ನಿಂದ ಬಂದಿದ್ದ ಪಾಕಿಸ್ತಾನಿ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿದಿದ್ದಾರೆ.
ಲಾಹೋರ್ ನಗರದ ಪಾಕಿಸ್ತಾನ ಪ್ರಜೆ ಬಹದ್ದೂರ್ ಅಲಿ ಎಂದು ಗುರುತು ಪತ್ತೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಶ್ರೀನಗರ ಕುಪ್ವಾರ ದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ನಾಲ್ಕು ಎಲ್ ಇಟಿ ಉಗ್ರರನ್ನು ಕೊಂದ ನಂತರ ಬಹದ್ದೂರ್ ಅಲಿಯನ್ನು ಗಡಿ ಭದ್ರತಾ ಪಡೆ ಸೈನಿಕರು ಜೀವಂತವಾಗಿ ಬಂಧಿಸಿದ್ದಾರೆ.
22 ವರ್ಷದ ಬಹದ್ದೂರ್ ಅಲಿ ಅಲಿಯಾಸ್ ಸೈಫುಲ್ಲಾ ಲಷ್ಕರ್ -ಇ- ತಯ್ಬಾ ಉಗ್ರರ ಜೊತೆ ಸೇರಿ ಗೆರಿಲ್ಲಾ ಯುದ್ದದ ತರಬೇತಿ ಪಡೆಯುತ್ತಿದ್ದ. ಈತನ ಬಳಿಯಿಂದ 1 ಎಕೆ 47 ರೈಫಲ್, ಎರಡು ಪಿಸ್ತೂಲ್, ಹಾಗೂ 23 ಸಾವಿರ ರೂ. ಭಾರತೀಯ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.
ಕಳೆದ ಎರಡು ತಿಂಗಳಲ್ಲಿ ಪಾಕಿಸ್ತಾನದ ಇಬ್ಬರು ಉಗ್ರರನ್ನು ಕುಪ್ವಾರ ಜಿಲ್ಲೆಯಿಂದ ಸೆರೆಹಿಡಿಯಲಾಗಿದೆ.
Advertisement