ಭಾರತದಲ್ಲಿ 2020ರ ವೇಳೆಗೆ 52 ಲಕ್ಷ ಮೆಟ್ರಿಕ್ ಟನ್ ಇ-ತ್ಯಾಜ್ಯ ಉತ್ಪಾದನೆ: ಅಧ್ಯಯನ

ಇ-ತ್ಯಾಜ್ಯದಲ್ಲಿ ವಿಶ್ವದಲ್ಲಿಯೇ ಭಾರತ 5ನೇ ಸ್ಥಾನದಲ್ಲಿದ್ದು, 2020ರ ವೇಳೆಗೆ 52 ಲಕ್ಷ ಮೆಟ್ರಿಕ್ ಟನ್ ಎಲೆಕ್ಟ್ರಾನಿಕ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಇ-ತ್ಯಾಜ್ಯದಲ್ಲಿ ವಿಶ್ವದಲ್ಲಿಯೇ ಭಾರತ 5ನೇ ಸ್ಥಾನದಲ್ಲಿದ್ದು, 2020ರ ವೇಳೆಗೆ 52 ಲಕ್ಷ ಮೆಟ್ರಿಕ್ ಟನ್ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಉತ್ಪಾದಿಸುವ ಗುರಿ ಹೊಂದಿದೆ. ನಮ್ಮ ದೇಶದಲ್ಲಿ ಪ್ರಸ್ತುತ 18 ಲಕ್ಷ ಮೆಟ್ರಿಕ್ ಟನ್ ಇ-ತ್ಯಾಜ್ಯ ಉತ್ಪಾದನೆಯಾಗುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.

ಭಾರತದ ಇ-ತ್ಯಾಜ್ಯ ವಾರ್ಷಿಕವಾಗಿ ಶೇಕಡಾ 30ರಷ್ಟು ಹೆಚ್ಚಾಗುತ್ತಿದೆ ಎಂದು ಅಸ್ಸೋಚಮ್ -ಸಿಕಿನೆಟಿಕ್ಸ್ ಅಧ್ಯಯನ ತಿಳಿಸಿದೆ.

2018ರ ವೇಳೆಗೆ ವಿಶ್ವದಲ್ಲಿ 130 ದಶಲಕ್ಷ ಟನ್ ಎಲೆಕ್ಟ್ರಾನಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಭಾರತೀಯರು ಶ್ರೀಮಂತರಾಗುತ್ತಿದ್ದು, ಇತ್ತೀಚೆಗೆ ಎಲೆಕ್ಟ್ರಾನಿಕ್ ಉತ್ಪನ್ನಗಳ ಖರೀದಿಗೆ, ಕಂಪ್ಯೂಟರ್ ಸಾಧನಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತಾರೆ. ನಂತರ ದೂರಸಂಪರ್ಕ ಸಾಧನಗಳು, ವಿದ್ಯುತ್ ಉಪಕರಣಗಳು ಮತ್ತು ವೈದ್ಯಕೀಯ ಸಾಧನಗಳಿಗೂ ಕೂಡ ಖರ್ಚು ಮಾಡುತ್ತಾರೆ. ಗೃಹೋಪಯೋಗಿ ಉತ್ಪನ್ನಗಳ ತ್ಯಾಜ್ಯ ಶೇಕಡಾ 4ರಷ್ಟಿದೆ.

ದೇಶದ ಒಟ್ಟು ಇ-ತ್ಯಾಜ್ಯಗಳಲ್ಲಿ ಶೇಕಡಾ 1.5ರಷ್ಟು ಮಾತ್ರ ಮರುಬಳಕೆ ಮಾಡಲಾಗುತ್ತದೆ. ಇದಕ್ಕೆ ಮೂಲಸೌಕರ್ಯ ಕೊರತೆ, ಕಾನೂನು, ಸರ್ಕಾರದ ಆಡಳಿತ ಕಾರಣವಾಗಿದೆ.
ಇ-ತ್ಯಾಜ್ಯವೆಂದರೆ ತಿರಸ್ಕರಿಸಲ್ಪಟ್ಟ ಕಂಪ್ಯೂಟರ್ ಮಾನಿಟರ್, ಮದರ್ ಬೋರ್ಡ್, ಕ್ಯಾಥೋಡ್ ರೇ ಟ್ಯೂಬ್, ಪ್ರಿಂಟೆಡ್ ಸರ್ಕ್ಯುಟ್ ಬೋರ್ಡ್, ಮೊಬೈಲ್ ಫೋನ್, ಚಾರ್ಜರ್, ಕಂಪ್ಯೂಟರ್ ಡಿಸ್ಕ್, ಹೆಡ್ ಫೋನ್, ವೈಟ್ ಗೂಡ್ಸ್(ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇಸ್, ಪ್ಲಾಸ್ಮಾ ಟೆಲಿವಿಷನ್, ಏರ್ ಕಂಡೀಷನರ್ಸ್, ರೆಫ್ರಿಜರೇಟರ್ ಇತ್ಯಾದಿಗಳು.

ಇ-ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡಿದರೆ ಅದರಿಂದ ಹೊರಸೂಸುವ ರಾಸಾಯನಿಕಗಳು ಮಣ್ಣಿಗೆ ಮತ್ತು ಮನುಷ್ಯನ ಆರೋಗ್ಯಕ್ಕೂ ಹಾನಿಯನ್ನುಂಟುಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಭಾರತದಲ್ಲಿ ಮೂರನೇ ಎರಡು ಭಾಗದಷ್ಟು ಇ-ತ್ಯಾಜ್ಯ ಘಟಕಗಳಲ್ಲಿ ಕೆಲಸ ಮಾಡುವವರು ಉಸಿರಾಟದ ತೊಂದರೆ, ತುರಿಕೆ, ಕಫ ಮತ್ತು ಗಂಟಲು ಹಿಸುಕುವಿಕೆ ಸಮಸ್ಯೆಯಿಂದ ಬಳಲುತ್ತಿರುತ್ತಾರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com