
ನವದೆಹಲಿ: ಮಥುರಾ ಹಿಂಸಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸೋಮವಾರ ಒಪ್ಪಿಗೆ ಸೂಚಿಸಿದೆ.
ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಮಥುರಾದ ಜವಾಹರ್ ಬಾಗ್ ನಲ್ಲಿ ಹಿಂಸಾಚರ ನಡೆದು 29 ಮಂದಿ ಮೃತಪಟ್ಟಿದ್ದರು.
ಮಥುರಾ ಘರ್ಷಣೆ ಪ್ರಕರಣವನ್ನು ತುರ್ತು ವಿಚಾರಣೆ ನಡೆಸುವಂತೆ ಕಾಮಿನಿ ಜೈಸ್ವಾಲ್ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಗಣಿಸಿರುವ ಸುಪ್ರೀಂಕೋರ್ಟ್. ನ್ಯಾಯಮೂರ್ತಿ ಪಿ.ಸಿ.ಫೋಷ್ಮತ್ತು ಅಮಿತಾವ ರಾಯ್ ನೇತೃತ್ವದ ಪೀಠದಲ್ಲಿ ನಾಳೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಘರ್ಷಣೆ ನಡೆದ ನಂತರ ಈ ಕುರಿತಂತ ದಾಖಲೆಗಳನ್ನು ನಾಶಪಡಿಸಲಾಗಿದೆ ಮತ್ತು ಸಾಕ್ಷಿ ನಾಶಪಡಿಸುವ ಸಲುವಾಗಿ 200ಕ್ಕೂ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವಕೀಲ ಜೈಸ್ವಾಲ್ ಅವರು ಹೇಳಿದ್ದಾರೆ.
ಘಟನೆ ಕುರಿತಂತೆ ಈ ಹಿಂದೆ ಮಾತನಾಡಿದ್ದ ಉತ್ತರ ಪ್ರದೇಶದ ಸಚಿವ ಶಿವಪಾಲ್ ಯಾದವ್ ಅವರು, ದಾಖಲೆಗಳಿಲ್ಲದೆ ಬಿಜೆಪಿಯವರು ಯಾರದ್ದೇ ಹೆಸರನ್ನು ತೆಗೆದುಕೊಳ್ಳಬಾರದು. ಮಥುರಾ ಘರ್ಷಣೆಗೆ ಆಡಳಿತಾತ್ಮಕದ ಅವನತಿಗಳು ಕಾರಣವಾಗಿರಬಹುದು. ಘಟನೆ ಕುರಿತಂತೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ತಲೆಮರೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.
Advertisement