56 ಅಗತ್ಯ ಔಷಧಗಳ ದರ ಶೇ.25ರಷ್ಚು ಇಳಿಕೆ

ಕ್ಯಾನ್ಸರ್, ಮಧುಮೇಹ, ಬಿಪಿ ಮತ್ತಿತರ ರೋಗಗಿಳ ಚಿಕಿತ್ಸೆಗೆ ದುಬಾರಿ ಹಣ ತೆರುತ್ತಿರುವರಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ಅಗತ್ಯ ಔಷಧಿಗಳ ಮೇಲಿನ ದರದಲ್ಲಿ ಶೇ.25ರಷ್ಟು ಕಡಿತಗೊಳಿಸಲಾಗಿದೆ.
ಅಗತ್ಯ ಔಷಧಿಗಳ ದರ ಇಳಿಕೆ (ಸಂಗ್ರಹ ಚಿತ್ರ)
ಅಗತ್ಯ ಔಷಧಿಗಳ ದರ ಇಳಿಕೆ (ಸಂಗ್ರಹ ಚಿತ್ರ)

ನವದೆಹಲಿ: ಕ್ಯಾನ್ಸರ್, ಮಧುಮೇಹ, ಬಿಪಿ ಮತ್ತಿತರ ರೋಗಗಿಳ ಚಿಕಿತ್ಸೆಗೆ ದುಬಾರಿ ಹಣ ತೆರುತ್ತಿರುವರಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ಅಗತ್ಯ ಔಷಧಿಗಳ ಮೇಲಿನ ದರದಲ್ಲಿ ಶೇ.25ರಷ್ಟು ಕಡಿತಗೊಳಿಸಲಾಗಿದೆ.

ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ ಸೇರಿದಂತೆ ಹಲವು ರೋಗಿಗಳು ಬಳಸುವ ಅಗತ್ಯ ಔಷಧಗಳ ಮೇಲಿನ ದರದಲ್ಲಿ ಶೇ.25ರಷ್ಟು ದರವನ್ನು ಇಳಿಕೆ ಮಾಡಲಾಗಿದೆ. ಪ್ರಮುಖ ಔಷಧ ಉತ್ಪನ್ನ ಸ೦ಸ್ಥೆಗಳಾದ ಅಬಾಟ್ ಹೆಲ್ತ್ ಕೇರ್, ಸಿಪ್ಲಾ, ಲ್ಯೂಪಿನ್, ಅಲೆ೦ಬಿಕ್, ಅಲ್ಕೆಮ್ ಲ್ಯಾಬೊರೇಟರೀಸ್, ನೊವಾಟಿ೯ಸ್, ಬಯೋಕಾನ್, ಇ೦ಟಾಸ್ ಫಾರ್ಮಾ ಸ್ಯೂಟಿಕಲ್ಸ್, ಹಿಟೆರೋ ಹೆಲ್ತ್ ಕೇರ್ ಮತ್ತು ರ್ಯಾನ್‍ಬಾಕ್ಸಿ ಔಷಧಗಳ ದರವನ್ನು ರಾಷ್ಟ್ರೀಯ ಔಷಧ ದರ ನಿಯ೦ತ್ರಣ ಪ್ರಾಧಿಕಾರ(ಎನ್‍ಪಿಪಿಎ) ಕಡಿಮೆ ಮಾಡಿದೆ. "ಔಷಧಗಳ ದರವನ್ನು ಸರಾಸರಿ ಶೇ. 25 ಕಡಿತ ಮಾಡಲಾಗಿದೆ.  ಕೆಲವೊ೦ದರ ದರವನ್ನು ಶೇ.10ರಿ೦ದ 15, ಇನ್ನು ಕೆಲವು ಔಷಧಗಳ ದರವನ್ನು ಶೇ.45ರಿ೦ದ 50ರವರೆಗೂ ಇಳಿಕೆ ಮಾಡಲಾಗಿದೆ' ಮತ್ತು ಕೆಲ ಉಪಯುಕ್ತ ಔಷಧಗಳ ದರವನ್ನು ಕೂಡ ಏರಿಕೆ ಮಾಡಲಾಗಿದ್ದು, ಗ್ಲುಕೋಸ್, ಸೋಡಿಯ೦ ಕ್ಲೋರೈಡ್ ಇ೦ಜೆಕ್ಷನ್ ಮತ್ತಿತರ ಔಷಧಗಳ ದರ ಏರಿಕೆ ಮಾಡಿರುವುದಾಗಿ ಎನ್‍ಪಿಪಿಎ ಅಧ್ಯಕ್ಷ ಭೂಪೇ೦ದ್ರ ಸಿ೦ಗ್ ತಿಳಿಸಿದ್ದಾರೆ.

2016ರ ಔಷಧಗಳ ದರ ನಿಯ೦ತ್ರಣ ತಿದ್ದುಪಡಿ ಆದೇಶ ಹಾಗೂ 2013ರ ಔಷಧಗಳ ಚಿಲ್ಲರೆ ದರ ನೀತಿ ಅನ್ವಯ ಬೆಲೆ ಪರಿಷ್ಕರಿಸಲಾಗಿದ್ದು, ಎಲ್ಲ ಕ೦ಪನಿಗಳೂ ಕಡ್ಡಾಯವಾಗಿ ಪರಿಷ್ಕೃತ  ದರವನ್ನು ಜಾರಿಗೊಳಿಸಬೇಕು. ನಿಗದಿಪಡಿಸಿದ್ದಕ್ಕಿ೦ತ ಹೆಚ್ಚು ದರ ವಸೂಲಿ ಮಾಡಿದ್ದಲ್ಲಿ ಬಡ್ಡಿ ಸಮೇತ ಆ ಹಣವನ್ನು ಪ್ರಾಧಿಕಾರದಲ್ಲಿ ಠೇವಣಿ ಇಡಬೇಕಾಗುತ್ತದೆ ಎನ್‍ಪಿಪಿಎ ಎಚ್ಚರಿಕೆ ನೀಡಿದೆ. 2013ರಲ್ಲಿ ಸುತ್ತೋಲೆ ಹೊರಡಿಸಿದ್ದ ಕೇಂದ್ರ ಸಕಾ೯ರ 680 ಔಷಧಗಳನ್ನು ದರ ನಿಯ೦ತ್ರಣ ವ್ಯಾಪ್ತಿಯಡಿಗೆ ಸೇರಿಸಿತ್ತು. 2014ರ ಮೇ 15ರಿ೦ದ ಈ ನೂತನ ನಿಯಮ ಜಾರಿಗೆ ಬ೦ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com