ಹಿ೦ದೂ ಮಹಾಸಾಗರದ ಮೇಲೆ ಭಾರತೀಯ ಸೇನೆಯ ಕಣ್ಗಾವಲು

ದಕ್ಷಿಣ ಹಿಂದೂ ಮಹಾಸಾಗರದ ಮೇಲೆ ಅಸ್ತಿತ್ವ ಸಾಧಿಸ ಹೊರಟಿರುವ ಚೀನಾ ದೇಶಕ್ಕೆ ಪ್ರಬಲ ತಿರುಗೇಟು ನೀಡಿರುವ ಭಾರತ ಹಿಂದೂ ಮಹಾಸಾಗರದ ತನ್ನ ಗಡಿ ಪ್ರದೇಶದಲ್ಲಿ ಬರುವ ಪಶ್ಚಿಮ ಮತ್ತು ಪೂವ೯ ಕರಾವಳಿ ದ್ವೀಪ ಪ್ರದೇಶಗಳಲ್ಲಿ ಭಾರತೀಯ ಸೇನೆ ತೀವ್ರ ನಿಗಾ ಇರಿಸಿದೆ.
ಹಿಂದೂ ಮಹಾಸಾಗರದ ಮೇಲೆ ಭಾರತೀಯ ಸೇನೆ ಕಣ್ಗಾವಲು (ಸಂಗ್ರಹ ಚಿತ್ರ)
ಹಿಂದೂ ಮಹಾಸಾಗರದ ಮೇಲೆ ಭಾರತೀಯ ಸೇನೆ ಕಣ್ಗಾವಲು (ಸಂಗ್ರಹ ಚಿತ್ರ)
Updated on

ನವದೆಹಲಿ: ದಕ್ಷಿಣ ಹಿಂದೂ ಮಹಾಸಾಗರದ ಮೇಲೆ ಅಸ್ತಿತ್ವ ಸಾಧಿಸ ಹೊರಟಿರುವ ಚೀನಾ ದೇಶಕ್ಕೆ ಪ್ರಬಲ ತಿರುಗೇಟು ನೀಡಿರುವ ಭಾರತ ಹಿಂದೂ ಮಹಾಸಾಗರದ ತನ್ನ ಗಡಿ ಪ್ರದೇಶದಲ್ಲಿ  ಬರುವ ಪಶ್ಚಿಮ ಮತ್ತು ಪೂವ೯ ಕರಾವಳಿ ದ್ವೀಪ ಪ್ರದೇಶಗಳಲ್ಲಿ ಭಾರತೀಯ ಸೇನೆ ತೀವ್ರ ನಿಗಾ ಇರಿಸಿದೆ.

ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಭಾರತ ತನ್ನ ಸೇನಾ ಅಸ್ತಿತ್ವ ಹೆಚ್ಚಿಸುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಕೇ೦ದ್ರ ಸಕಾ೯ರ ಮು೦ದಾಗಿದ್ದು,  ಅ೦ಡಮಾನ್, ಲಕ್ಷದ್ವೀಪ ಪ್ರದೇಶಗಳಲ್ಲಿ ಸೇನಾ ಅಸ್ತಿತ್ವ ಹೆಚ್ಚಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಇದಕ್ಕೆ ಮೊದಲ ಹಂತ ಎಂಬಂತೆ ಭಾರತೀಯ ಸೇನೆ ಈಗಾಗಲೇ ಲಕ್ಷದ್ವೀಪದ ಅ೦ದ್ರೋಥ  ದ್ವೀಪದಲ್ಲಿ ಈಗಾಗಲೇ ಹೆಚ್ಚುವರಿಯಾಗಿ ನೌಕಾಪಡೆಯ ಘಟಕವೊ೦ದನ್ನು ನಿಯೋಜನೆ ಮಾಡಿದೆ. ಸೇನಾ ಮೂಲಗಳ ಪ್ರಕಾರ ಹಿ೦ದೂಮಹಾಸಾಗರದ ಮೇಲೆ ಹೆಚ್ಚಿನ ನಿಗಾ ಇಡುವುದು  ಕೇಂದ್ರ ಸಕಾ೯ರದ ಪ್ರಮುಖ ಉದ್ದೇಶ ಎನ್ನಲಾಗಿದೆ.

ಇದಲ್ಲದೆ ಒಡಿಶಾದ ಕರಾವಳಿ ತೀರದಲ್ಲಿರುವ ಟ್ಯುಟಿಕಾರಿನ್ ಮತ್ತು ಪಾರಾದಿಪ್ ಪ್ರದೇಶಗಳಲ್ಲಿಯೂ ಸೇನೆಯನ್ನು ನಿಯೋಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆ ಮೂಲಕ ತನ್ನ ವ್ಯಾಪ್ತಿಯ  ಪ್ರದೇಶಗಳನ್ನು ಸುಭದ್ರ ಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಈ ಹಿಂದೆ ಹಿಂದೂ ಮಹಾಸಾಗರದಲ್ಲಿ ಸೇನಾ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಅಮೆರಿಕ ನೀಡಿದ್ದ ಸಲಹೆಯನ್ನು ಗಂಭೀರವಾಗಿ ಪರಿಗಣಸಿರುವ ಕೇಂದ್ರ ಸರ್ಕಾರ ಆ ಸಂಬಂಧ ಕಾರ್ಯ  ಪ್ರವೃತ್ತವಾಗಿದ್ದು, ಇದೇ ಕಾರಣಕ್ಕಾಗಿ ಹಿಂದೂ ಮಹಾಸಾಗರದ ತನ್ನ ಗಡಿ ವ್ಯಾಪ್ತಿಯಲ್ಲಿನ ಪ್ರದೇಶಗಳಲ್ಲಿ ಹೆಚ್ಚುವರಿ ಸೇನಾ ತುಕಡಿಗಳನ್ನು ನಿಯೋಜಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com