2000 ಜನರು ಭೂಕಬಳಿಕೆ ಮಾಡಿದ್ದರೂ ಮಾಹಿತಿ ಇಲ್ಲ...ಇದೆಂತಹ ಸರ್ಕಾರ: ರಾಜನಾಥ್

ಮಥುರಾದಲ್ಲಿ 2 ಸಾವಿರದಷ್ಟು ಜನರು ಭೂಕಬಳಿಕೆಮಾಡಿದ್ದಾರೆ. ರಾಜ್ಯದಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಭೂಕಬಳಿಕೆಯಾಗಿದ್ದರೂ ಇಲ್ಲಿ ಸರ್ಕಾರಕ್ಕೆ ಮಾತ್ರ ಈ ಬಗೆಗಿನ ಮಾಹಿತಿ ತಿಳಿದಿಲ್ಲ...

ಲಖನೌ: ಮಥುರಾದಲ್ಲಿ 2 ಸಾವಿರದಷ್ಟು ಜನರು ಭೂಕಬಳಿಕೆಮಾಡಿದ್ದಾರೆ. ರಾಜ್ಯದಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಭೂಕಬಳಿಕೆಯಾಗಿದ್ದರೂ ಇಲ್ಲಿ ಸರ್ಕಾರಕ್ಕೆ ಮಾತ್ರ ಈ ಬಗೆಗಿನ ಮಾಹಿತಿ ತಿಳಿದಿಲ್ಲ. ಇದೆಂತಹ ಸರ್ಕಾರ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಆಯೋಜನೆ ಮಾಡಲಾಗಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿರುವ ಅವರು, ಮಥುರಾದಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಇಲ್ಲಿನ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ. ಆದರೆ, ಈ ಬಗ್ಗೆ ಸರ್ಕಾರದ ಅರಿವೇ ಇಲ್ಲ. ಇದಾವ ರೀತಿಯ ಸರ್ಕಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲಹಾಬಾದ್ ಹೈ ಕೋರ್ಟ್ ಆದೇಶದ ಮೇರೆಗೆ ಪೊಲೀಸರು ಅಕ್ರಮವಾಗಿ ಕಬಳಿಕೆ ಮಾಡಿದ್ದ ಭೂಮಿಯನ್ನು ತೆರವುಗೊಳಿಸಲು ಹೋದಾಗ ಬಹುಸಂಖ್ಯಾತ ಜನರು ಒಟ್ಟಾರೆ ಸೇರಿದ್ದಾರೆ. ಈ ವೇಳೆ ಸ್ಥಳದಲ್ಲಿ ಘರ್ಷಣೆ ಆರಂಭವಾಗಿ ಘರ್ಷಣೆ ಹಿಂಸಾಚಾರಕ್ಕೆ ತಿರುಗಿದೆ. ಘಠನೆಯಲ್ಲಿ 29 ಮಂದಿ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಮಥುರಾ ಘರ್ಷಣೆಯನ್ನು ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹಿಸಿದ್ದೇ ಆದರೆ, ಸಿಬಿಐ ತನಿಖೆಗೆ ಒಪ್ಪಿಸಲು ಕೇಂದ್ರ ಸಿದ್ಧವಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com