ತೆಲಂಗಾಣದಲ್ಲಿ ಶೇ. 99ರಷ್ಟು ಮಂದಿ ಮಾಂಸಾಹಾರ ಪ್ರಿಯರಂತೆ!

ದೇಶದಲ್ಲಿ ಅತೀ ಹೆಚ್ಚು ಮಾಂಸಾಹರಿಗಳ ರಾಜ್ಯವೆಂಬ ಹೆಸರಿಗೆ ತೆಲಂಗಾಣ ಪಾತ್ರವಾಗಿದ್ದು, ರಾಜ್ಯದಲ್ಲಿ ಶೇ.99 ರಷ್ಟು ಜನ ಮಾಂಸಹಾರಿಗಳಾಗಿದ್ದಾರೆಂದು ಸಮೀಕ್ಷಾ...
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ಹೈದರಾಬಾದ್: ದೇಶದಲ್ಲಿ ಅತೀ ಹೆಚ್ಚು ಮಾಂಸಾಹರಿಗಳ ರಾಜ್ಯವೆಂಬ ಹೆಸರಿಗೆ ತೆಲಂಗಾಣ ಪಾತ್ರವಾಗಿದ್ದು, ರಾಜ್ಯದಲ್ಲಿ ಶೇ.99 ರಷ್ಟು ಜನ ಮಾಂಸಹಾರಿಗಳಾಗಿದ್ದಾರೆಂದು ಸಮೀಕ್ಷಾ ವರದಿಯೊಂದು ಹೇಳಿಕೊಂಡಿದೆ.

ರಿಜಿಸ್ಟ್ರಾರ್ ಜನರಲ್ ಆಫ್ ಭಾರತ ಸಮೀಕ್ಷೆ ಈ ಸಮೀಕ್ಷೆಯನ್ನು ನಡೆಸಿದ್ದು, ತೆಲಂಗಾಣ ರಾಜ್ಯದಲ್ಲಿ ಪುರುಷರು ಶೇ.98.8 ಮತ್ತು ಮಹಿಳೆಯರು ಶೇ.98.6ರಷ್ಟು ಮಾಂಸಾಹಾರಿಗಳಿದ್ದಾರೆಂದು ತಿಳಿಸಿದೆ.

ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ ಮತ್ತು ಕೇರಳದಲ್ಲಿ ಅತೀ ಹೆಚ್ಚು ಮಾಂಸಹಾರಿಗಳಿರುವುದಾಗಿ ವರದಿ ತಿಳಿಸಿದ್ದು, ರಾಜಸ್ತಾನ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಅತೀ ಹೆಚ್ಚು ಸಸ್ಯಾಹಾರಿಗಳನ್ನು ಒಳಗೊಂಡಿರುವ ರಾಜ್ಯಗಳಾಗಿವೆ ಎಂದು ತಿಳಿಸಿವೆ.

ಇನ್ನು ಕಳೆದ 10 ವರ್ಷಗಳಿಗೆ ಹೋಲಿಸಿದರೆ 2004ರಲ್ಲಿ ಶೇ.75ರಷ್ಟು ಮಾಂಸಾಹಾರಿಗಳ ಸಂಖ್ಯೆ 2014ಕ್ಕೆ ಶೇ.71ಕ್ಕೆ ಇಳಿದಿದೆ.

ಮಾಂಸ ಆಹಾರ ಸೇವನೆ ತೆಲಂಗಾಣ ರಾಜ್ಯದ ಆಹಾರದ ಪದ್ಧತಿಯನ್ನು ಸೂಚಿಸುತ್ತದೆ. ಈ ರಾಜ್ಯದಲ್ಲಿನ ಜನರು ಬೆಳಿಗಿನ ತಿಂಡಿ ಸಮಯದಲ್ಲೂ ಕುರಿ ಹಾಗೂ ಕೋಳಿಯ ಮಾಂಸದಿಂದ ಮಾಡಿದ ಆಹಾರವನ್ನು ಸೇವಿಸುತ್ತಾರೆಂದು ತಜ್ಞ ಸಬ್ಯಸಾಚಿ ರಾಯ್ ಚೌದುರಿಯವರು ಹೇಳಿದ್ದಾರೆ.

ಇಲ್ಲಿನ ಮಾಂಸಹಾರಿಗಳು ಕೋಳಿ ಹಾಗೂ ಕುರಿಯ ಕಿಡ್ನಿ, ಮಿದುಳು, ಹಂದಿಗಳ ಕಾಲು ಹಾಗೂ ಇನ್ನಿತರೆ ಭಾಗಗಳನ್ನು ಸೇವನೆ ಮಾಡುತ್ತಾರೆ. ಇನ್ನು ಕೆಲವು ಮೊಲ, ಬಾತು ಕೋಳಿ ಯಂತಹ ಪ್ರಾಣಿಗಳನ್ನು ತಿನ್ನುತ್ತಾರೆ. ಬದಲಾದ ಜೀವನ ಶೈಲಿಗಳು ಆಹಾರ ಪದ್ಧತಿಗಳನ್ನು ಬದಲಿಸುತ್ತದೆ. ಇದರಿಂದಾಗಿ ಮಾಂಸಹಾರಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತೆಲಂಗಾಣ ಕುರಿಗಳ ಸಂಖ್ಯೆಯಲ್ಲಿ ದೇಶದಲ್ಲೇ 2ನೇ ಸ್ಥಾನ ಪಡೆದುಕೊಂಡಿದ್ದು, ಕೋಳಿ ಸಾಗಾಣಿಕೆಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದೆ. 2014-15ನೇ ವರ್ಷದಲ್ಲಿ 505 ಲಕ್ಷ ಮೆಟ್ರಿಕ್ ಟನ್ ಗಳನ್ನು ಮಾಂಸವನ್ನು ಉತ್ಪಾದನೆ ಮಾಡಿದ್ದು, 1,061 ಕೋಟಿ ಮೊಟ್ಟೆಯನ್ನು ಉತ್ಪಾದಿಸಿದೆ. 2015 ನವೆಂಬರ್ ನಲ್ಲಿ 560 ಕೋಟಿ ಮೊಟ್ಟ ಹಾಗೂ 264 ಲಕ್ಷ ಮೆಟ್ರಿಕ್ ಟನ್ ರಷ್ಟು ಮಾಂಸವನ್ನು ಉತ್ಪಾದಿಸಿದೆ ಎಂದು ತಿಳಿದುಬಂದಿದೆ.

ಕೋಳಿ ಹಾಗೂ ಮೊಟ್ಟೆ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುವ ಆಹಾರವಾಗಿದೆ. ಆದರೆ, ಕೆಂಪು ಮಾಂಸಗಳು ಆರೋಗ್ಯಕ್ಕೆ ಸಮಸ್ಯೆಗಳನ್ನು ಒಡ್ಡಲಿದೆ ಎಂದು ತಜ್ಞರು ಹೇಳಿಕೊಂಡಿದ್ದಾರೆ. ಕುರಿ ಹಾಗೂ ಹಂದಿ ಮಾಂಸದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿರುವುದರಿಂದ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com