ವಿಮಾನ ಪ್ರಯಾಣಿಕರಿಗೆ ಶೀಘ್ರದಲ್ಲೇ ಬರಲಿದೆ 'ಅಚ್ಚೇದಿನ್'

ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ಬಂದರೂ ವಿಮಾನ ಬರುವುದರಿಂದ ಹಲವು ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ತಡವಾಗಿ ಬರುವ ವಿಮಾನದಿಂದಾಗಿ ಎಷ್ಟೋ ಮಂದಿಯ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ಬಂದರೂ ವಿಮಾನ ಬರುವುದರಿಂದ ಹಲವು ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ತಡವಾಗಿ ಬರುವ ವಿಮಾನದಿಂದಾಗಿ ಎಷ್ಟೋ ಮಂದಿಯ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಸಮಸ್ಯೆಗಳಿಗೆ ವಿಮಾನಯಾನ ಸಚಿವಾಲಯ ಇದೀಗ ಫುಲ್ ಸ್ಟಾಪ್ ಇಟ್ಟಿದ್ದು, ವಿಮಾನ ಪ್ರಯಾಣಿಕರಿಗೆ ಶೀಘ್ರದಲ್ಲೇ ಅಚ್ಚೇದಿನ್ ಬರಲಿದೆ.

ವಿಮಾನಯಾನ ಸಚಿವಾಲಯ ಪ್ರಯಾಣಿಕ ಸ್ನೇಹಿ ಹೊಸ ನಿಮಯಗಳನ್ನು ಘೋಷಿಸಿದ್ದು, ಟಿಕೆಟ್ ರದ್ದು ಶುಲ್ಕವು ಅದರ ಮೂಲ ಬೆಲೆಯನ್ನು ಮೀರಬಾರದು ಎಂದು ಹೇಳಿದೆ.

ಅಲ್ಲದೆ, ವಿಮಾನ ಬೋರ್ಡಿಂಗ್ ವೇಳೆ ಓವರ್-ಬುಕಿಂಗ್ ನಿಂದ ಸ್ಥಳವಿಲ್ಲದೆ ಟಿಕೆಟ್ ರದ್ದಾದಲ್ಲಿ ಪ್ರಯಾಣಿಕರಿಗೆ ರು. 20 ಸಾವಿರ ವರೆಗೂ ಪರಿಹಾರ ನೀಡಬೇಕು ಎಂದು ಹೇಳಿದ್ದು, ಪ್ರಯಾಣಿಕರು ಟಿಕೆಟ್ ರದ್ದುಗೊಳಿಸಿದ್ದಲ್ಲಿ ಹಣವನ್ನು ನಗದು ರೂಪದಲ್ಲಿ ಪಡೆದುಕೊಳ್ಳುವ ಅಥವಾ ಕ್ರೆಡಿಟ್ ರೂಪದಲ್ಲಿ ಇರಿಸುವ ಅವಕಾಶವನ್ನು ನೀಡಿದೆ.

ವಿಮಾನ ಸಚಿವಾಲಯ ಘೋಷಿಸಿರುವ ನಿಯಮಗಳು ಈ ಕೆಳಕಂಡಂತಿವೆ...

  • ವಿಶೇಷ ಪ್ರಯಾಣ ದರ, ಪ್ರೋಮೋ ಸೇರಿದಂತೆ ಎಲ್ಲಾ ರೀತಿಯ ದರಗಳ ಮೇಲೆ ಮರುಪಾವತಿಗೆ ಅವಕಾಶ ಅನ್ವಯವಾಗಲಿದೆ. ವಿಮಾನ ದರ ಮರುಪಾವತಿಗೆ ಹೆಚ್ಚುವರಿ ಶುಲ್ಕ ಪಡೆಯಲಾಗುವುದಿಲ್ಲ.
  • ಆನ್ ಲೈನ್ ಮತ್ತು ಮಧ್ಯವರ್ತಿಗಳ ಮೂಲಕ ಮಾಡಿದ ಬುಕಿಂಗ್ ಗಳಿಗೆ 15 ದಿನಗಳ ಒಳಗಾಗಿ ಮರುಪಾವತಿ ಹಣವನ್ನು ಹಿಂದಿರುಗಿಸಬೇಕಿದೆ. ಪ್ರಯಾಣಿಕರ ಲಗೇಜ್ 15 ಕೆ.ಜಿ ಮೀರಿದಲ್ಲಿ ಹೆಚ್ಚುವರಿ ಪ್ರತಿ ಕೆ.ಜಿಗೆ ಕೇಲವ ರು.100ರಂತೆ ಹಣವನ್ನು ಪಾವತಿಸಬೇಕು.
  • ವಿಮಾನ ಸಂಸ್ಥೆ ವಿಮಾಮ ರದ್ಧತಿ ಸಂದರ್ಭದಲ್ಲಿ 24 ಗಂಟೆ ಮುಂಚಿವಾಗಿ ಘೋಷಿಸಿದಲ್ಲಿ ರು. 10 ಸಾವಿರ ವರೆಗೂ ಪರಿಹಾರ ನೀಡುವುದು ಮುಂತಾದ ನಿಯಮಗಳನ್ನು ಸಚಿವಾಲಯ ಘೋಷಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com