ವಿಡಿಯೋ-ಮಾಂಸ ಬದಲಾವಣೆಯಿಂದ ದೇಶ ಬದಲಾಗಲ್ಲ: ಮೋದಿಗೆ ಕನ್ನಯ್ಯ

ಇಂದು ದೇಶದಲ್ಲಿನ ಎಲ್ಲಾ ವಿಶ್ವವಿದ್ಯಾಲಯದಲ್ಲಿ ತುರ್ತುಪರಿಸ್ಥಿತಿಯಂದ ಸ್ಥಿತಿ ಎದುರಾಗಿದ್ದು, ಮಾಂಸ ಅಥವಾ ವಿಡಿಯೋ ಬದಲಾವಣೆಯಿಂದ ದೇಶ ಬದಲಾಗಲ್ಲ ಎಂದು ಜೆಎನ್ ಯು ವಿದ್ಯಾರ್ಥಿ...
ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್
ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್

ನವದೆಹಲಿ: ಇಂದು ದೇಶದಲ್ಲಿನ ಎಲ್ಲಾ ವಿಶ್ವವಿದ್ಯಾಲಯದಲ್ಲಿ ತುರ್ತುಪರಿಸ್ಥಿತಿಯಂದ ಸ್ಥಿತಿ ಎದುರಾಗಿದ್ದು, ಮಾಂಸ ಅಥವಾ ವಿಡಿಯೋ ಬದಲಾವಣೆಯಿಂದ ದೇಶ ಬದಲಾಗಲ್ಲ ಎಂದು ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಹೇಳಿದ್ದಾರೆ.

ದಾದ್ರಿ ಪ್ರಕರಣ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿರುವ ಕನ್ನಯ್ಯ, ಮೋದಿ ಜೀ, ನಿಮ್ಮ ಅಧಿಕಾರದ ಅವಧಿಯಲ್ಲಿ ವಿಡಿಯೋ ಅಥವಾ ಮಾಂಸ ಬದಲಾವಣೆ ಮಾಡಿದ ಕೂಡಲೇ ದೇಶ ಬದಲಾಗಲ್ಲ. ಕೆಟ್ಟದರಿಂದ ಒಳ್ಳೆಯ ದಾರಿಯೆಡೆಗೆ ಸಾಗಿದರೆ ಮಾತ್ರ ದೇಶ ಬದಲಾಗಲು ಸಾಧ್ಯ. ಯುವಕರು ಹಾಗೂ ವಿದ್ಯಾರ್ಥಿಗಳು ನಿಮ್ಮ ಮೇಲೆ ಸಾಕಷ್ಟು ನಂಬಿಕೆಗಳನ್ನಿಟ್ಟುಕೊಂಡು ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾನೆ.

ಇಂದು ದೇಶದಲ್ಲಿನ ಪ್ರತೀಯೊಂದು ವಿಶ್ವವಿದ್ಯಾಲಯದಲ್ಲೂ ತುರ್ತುಪರಿಸ್ಥಿಯಂತಹ ವಾತಾವರಣ ಎದುರಾಗಿದೆ. ಅಧಿಕಾರಕ್ಕೆ ಬರುವಾದ ಅಚ್ಛೇ ದಿನ್ ಎಂಬ ಘೋಷಣೆಗಳನ್ನು ಕೂಗಿದ್ದಿರಿ. ಇಂತಹ ಪರಿಸ್ಥಿತಿಯನ್ನು ತಂದೊಡ್ಡು ಸಲುವಾಗಿಯೇ ಘೋಷಣೆಯನ್ನು ನೀಡಿದ್ದಿರಾ?

ಕಳೆದ 2 ವರ್ಷದಲ್ಲಿ ಅಭಿವೃದ್ಧಿ ಕಾರ್ಯ ಏನು ಮಾಡಿದ್ದೀರಿ? ಕೇವಲ ಜಾಹೀರಾತುಗಳಿಗಾಗಿಯೇ ನೀವು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದ್ದೀರಿ. ಒಬ್ಬ ವಿದ್ಯಾರ್ಥಿಯಾಗಿ ನಿಮ್ಮನ್ನು ಪ್ರಶ್ನೆ ಮಾಡಲು ಇಚ್ಛಿಸುತ್ತೇನೆ. ರು.200 ಕೋಟಿ ಹಣವನ್ನು ಕೇವಲ ಜಾಹೀರಾತುಗಳಿಗಾಗಿ ವ್ಯಯಿಸಿದ್ದೀರಿ. ಆದರೆ. ರು.90 ಕೋಟಿಯಾದರೂ  ನಾನ್ ನೆಟ್ ಸಂಶೋಧನಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವಾಗಿ ನೀಡಿಲ್ಲ. ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವುದಾಗಿ ಹೇಳಿದ್ದಿರಿ, ಆದರೆ, ಯಾವುದೇ ಹೊಸ ಉದ್ಯೋಗಗಳು ಸೃಷ್ಟಿಯಾಗಲಿಲ್ಲ.

ಕಷ್ಟ ತಾಳಲಾರದೆ ಇಂದು ದೇಶದಲ್ಲಿ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಡತನದಲ್ಲಿ ಜೀವನ ನಡೆಸುತ್ತಿರುವವರ ಏಳಿಗೆಯಾಗದೆ ಮತ್ತಷ್ಟು ಬಡತನದಿಂದ ಕುಗ್ಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರಿಸಲು ಸಹಾಯ ಸಿಗುತ್ತಿಲ್ಲ. ಇನ್ನು ವಿಶ್ವವಿದ್ಯಾಲಗಳಲ್ಲಿ ವಿದ್ಯಾರ್ಥಿಗಳು ತಾರತಮ್ಯಗಳನ್ನು ಎದುರಿಸುತ್ತಿದ್ದಾರೆಂದು ಹೇಳಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com