ನಾಗ್ಪುರದಲ್ಲಿ ಜನಿಸಿದ್ದ ವಿಚಿತ್ರ ಮಗು ಸಾವು

ನಾಗ್ಪುರದ ಲತಾ ಮಂಗೇಷ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದರಲ್ಲಿ ಜನಿಸಿದ್ದ ವಿಚಿತ್ರ ಮಗು ಮಂಗಳವಾರ ಅಸುನೀಗಿದೆ...
'ಹರ್ಲೇಕ್ವಿನ್ ಇಚ್​ತ್ಯೋಸಿಸ್' ಎಂಬ ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದ ಮಗು
'ಹರ್ಲೇಕ್ವಿನ್ ಇಚ್​ತ್ಯೋಸಿಸ್' ಎಂಬ ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದ ಮಗು

ನಾಗ್ಪುರ: ನಾಗ್ಪುರದ ಲತಾ ಮಂಗೇಷ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದರಲ್ಲಿ ಜನಿಸಿದ್ದ ವಿಚಿತ್ರ ಮಗು ಮಂಗಳವಾರ ಅಸುನೀಗಿದೆ.

23 ವರ್ಷದ ಅಮರಾವತಿ ಎಂಬ ಮಹಿಳೆ ವಿರಳದಲ್ಲಿ ವಿರಳವಾದ ಹರ್ಲೇಕ್ವಿನ್ ಇಚ್​ತ್ಯೋಸಿಸ್ ಎಂಬ ನ್ಯೂನತೆಯಿಂದ ಬಳಲುತ್ತಿದ್ದ ವಿಚಿತ್ರ ಮಗುವೊಂದಕ್ಕೆ ಜನ್ಮ ನೀಡಿದ್ದರು. ಮಗು ಚರ್ಮವೇ ಇಲ್ಲದ ಸ್ಥಿತಿಯಲ್ಲಿ ಹಾಗೂ ಮನುಷ್ಯನ ದೈಹಿಕ ಗುಣಲಕ್ಷಣಗಳಿಗೆ ತದ್ವಿರುದ್ಧವಾಗಿ ಜನಿಸಿತ್ತು.

ಮಗು ಹುಟ್ಟಿದ ಸಂದರ್ಭದಲ್ಲಿ ಮಾತ್ರ ಉಸಿರಾಟದ ಸಮಸ್ಯೆ ಇತ್ತು. ಇದೀಗ ಉಸಿರಾಟದ ಯಾವುದೇ ಸಮಸ್ಯೆಯಿಲ್ಲ. ಮಗುವಿನ ಆರೋಗ್ಯ ಸ್ಥಿರವಾಗಿದ್ದು, ವೆಂಟಿಲೇಟರ್ ನಲ್ಲಿರಿಸಲಾಗಿದೆ. ಇಂತಹ ರೋಗದಿಂದ ಬಳುತ್ತಿರುವ ಮಕ್ಕಳು ಬದುಕುಳಿಯುವ ಸಾಧ್ಯತೆ ಅತೀ ವಿರಳ ಎಂದು ನಿನ್ನೆಯಷ್ಟೇ ವೈದ್ಯರು ಹೇಳಿದ್ದರು.

ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಮಗು ಹರ್ಲೇಕ್ವಿನ್ ಇಚ್​ತ್ಯೋಸಿಸ್ ಎಂಬ ನ್ಯೂನತೆಯಿಂದ ಬಳಲುತ್ತಿತ್ತು. ಈ ರೋಗವು ವಂಶವಾಹಿ ಸೀಳುವಿಕೆಯಿಂದ ಬರುತ್ತದೆ ಎಂದು ವೈದ್ಯರು ತಿಳಿಸಿದ್ದರು.

ಮಗುವಿನ ತಂದೆ ಅಮರಾವತಿಯಲ್ಲಿ ಬಡ ರೈತನಾಗಿದ್ದು, ಮಗು ಜನಿಸುತ್ತಿದ್ದಂತೆ ಮಗುವಿನ ಅಜ್ಜಿ ಆಶ್ಚರ್ಯ ವ್ಯಕ್ತಪಡಿಸಿದ್ದರು. ಇದೀಗ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಾರೆಂದು ವೈದ್ಯ ಕಜಲ್ ಮಿತ್ರ ಅವರು ಹೇಳಿದ್ದಾರೆ.

ಮಗುವನ್ನು ನೋಡಿದರೆ ತಾಯಿಗೆ ಆಘಾತವಾಗಬಹುದೆಂಬ ಉದ್ದೇಶದಿಂದ ಮಗುವನ್ನು ಭಾನುವಾರದವರೆಗೂ ತಾಯಿಗೆ ತೋರಿಸಿರಲಿಲ್ಲ. ಸೋಮವಾರ ಮಧ್ಯಾಹ್ನ ವೈದ್ಯರ ತಂಡ ಎಲ್ಲರೂ ಸೇರಿ ಮಗುವನ್ನು ತಾಯಿಗೆ ತೋರಿಸಲಾಗಿತ್ತು ಎಂದು ಮಿತ್ರ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com