ಸಹಾಯ ಯಾಚಿಸಿದ ಶಾಲೆಗೆ 76 ಲಕ್ಷ ರು. ಅನುದಾನ ನೀಡಿದ ಸಚಿನ್ ತೆಂಡೂಲ್ಕರ್

ಕ್ರಿಕೆಟ್ ದಿಗ್ಗಜ ಹಾಗೂ ರಾಜ್ಯಸಭಾ ಸದಸ್ಯ ಸಚಿನ್ ತೆ೦ಡೂಲ್ಕರ್ ಪಶ್ಚಿಮ ಬ೦ಗಾಳದ ಮಿಡ್ನಾಪುರ ಜಿಲ್ಲೆಯ ಶಾಲೆಯೊ೦ದಕ್ಕೆ 76 ಲಕ್ಷ ರು. ನೆರವು ನೀಡುವ ಮೂಲಕ ಔದಾರ್ಯ ಮೆರೆದಿದ್ದಾರೆ...
ಸಚಿನ್ ಮತ್ತು ಮಕ್ಕಳು (ಸಂಗ್ರಹ ಚಿತ್ರ)
ಸಚಿನ್ ಮತ್ತು ಮಕ್ಕಳು (ಸಂಗ್ರಹ ಚಿತ್ರ)

ಮಿಡ್ನಾಪುರ: ಕ್ರಿಕೆಟ್ ದಿಗ್ಗಜ ಹಾಗೂ ರಾಜ್ಯಸಭಾ ಸದಸ್ಯ ಸಚಿನ್ ತೆ೦ಡೂಲ್ಕರ್ ಪಶ್ಚಿಮ ಬ೦ಗಾಳದ ಮಿಡ್ನಾಪುರ ಜಿಲ್ಲೆಯ ಶಾಲೆಯೊ೦ದಕ್ಕೆ 76 ಲಕ್ಷ ರು. ನೆರವು ನೀಡುವ ಮೂಲಕ ಔದಾರ್ಯ ಮೆರೆದಿದ್ದಾರೆ.

ರಾಜ್ಯಸಭಾ ಸದಸ್ಯರೂ ಆಗಿರುವ ಸಚಿನ್ ತೆಂಡೂಲ್ಕರ್ ಸ೦ಸದರ ನಿಧಿಯಿ೦ದ ಈ ಅನುದಾನವನ್ನು ಕಳೆದ ವಷ೯ವೇ ಬಿಡುಗಡೆಗೊಳಿಸಿದ್ದು, ಇದೀಗ ತಡವಾಗಿ ಈ ವಿಚಾರ ಬೆಳಕಿಗೆ ಬಂದಿದೆ.  ಮಿಡ್ನಾಪುರ ಜಿಲ್ಲೆಯ ಸ್ವಣ೯ಮಯೀ ಸಸ್ಮಲ್ ಶಿಕ್ಷಾ ನಿಕೇತನ್ ಹೆಸರಿನ ಶಾಲೆಯ ಸಿಬ್ಬ೦ದಿ ವಗ೯ ಈ ಹಿಂದೆ ಶಾಲೆಯ ಜೀರ್ಣೋದ್ಧಾರಕ್ಕಾಗಿ ಸಚಿನ್ ತೆಂಡೂಲ್ಕರ್ ಅವರಿಗೆ ಪತ್ರವೊಂದನ್ನು  ಬರೆದಿತ್ತು. ಶಾಲಾ ಆಡಳಿತ ಮಂಡಳಿ ನಡೆಸುತ್ತಿದ್ದ ಅಭಿವೃದ್ಧಿ ಕಾರ್ಯ ಆರ್ಥಿಕ ಮುಗ್ಗಟ್ಟಿನಿಂದ ನಿಧಾನಗತಿಯಲ್ಲಿ ಸಾಗುತ್ತಿತ್ತು. ಹೀಗಾಗಿ ಸ್ಥಳೀಯ ಲೋಕಸಭಾ ಸದಸ್ಯರನ್ನು ಸಂಪರ್ಕಿಸಿ  ಅನುದಾನಕ್ಕೆ ಮನವಿ ಮಾಡಲಾಗಿತ್ತಾದರೂ ಅವರಿಂದ ಯಾವುದೇ ಸೂಕ್ತ ಪರಿಹಾರ ದೊರೆತಿರಲಿಲ್ಲ.

ಹೀಗಾಗಿ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಶಾಲಾ ಸಿಬ್ಬಂದಿಗಳು ನೆರವು ಕೋರಿ ಪತ್ರ ಬರೆದಿದ್ದರು. ಪತ್ರ ಬರೆದು ಆರು ತಿಂಗಳಾದರೂ ಯಾವುದೇ ಉತ್ತರ ಬಾರದ ಕಾರಣ  ನೆರವಿನ ಆಸೆ ಕೈ ಬಿಟ್ಟಿದ್ದರು. ಆಶ್ಚರ್ಯವೆನ್ನುವಂತೆ ಇತ್ತೀಚೆಗೆ ಸಚಿನ್ ತೆಂಡೂಲ್ಕರ್ ಅವರಿಂದ ಪತ್ರ ಬಂದಿದ್ದು, ತಮ್ಮ ಪ್ರದೇಶಾಭಿವೃದ್ದಿ ನಿಧಿಯಿಂದ ಶಾಲೆಯ ಕಟ್ಟಡ ಕಾಮಗಾರಿಗೆ 76 ಲಕ್ಷ  ರುಪಾಯಿಗಳನ್ನು ಮಂಜೂರು ಮಾಡಿಸಿರುವುದಾಗಿ ಸಚಿನ್ ಪತ್ರದಲ್ಲಿ ತಿಳಿಸಿದ್ದಾರೆ. ಪ್ರಸ್ತುತ   ಸಚಿನ್ ತೆಂಡೂಲ್ಕರ್ ಸಂಸದರ ನಿಧಿಯಿಂದ 76 ಲಕ್ಷ ರು. ಬಿಡುಗಡೆಗೊಳಿಸಿದ್ದಾರೆ ಎಂದು  ತಿಳಿದುಬಂದಿದೆ.



ಈ ಹಣದಿಂದ ಶಾಲೆಗೆ ಗ್ರ೦ಥಾಲಯ, ಪ್ರಯೋಗಾಲಯ ಮತ್ತು ಬಾಲಕಿಯರ ವಿಶೇಷ ಕೊಠಡಿ ನಿಮಿ೯ಸಲು ಬಳಕೆ ಮಾಡಲಾಗಿದೆ. ಇದೀಗ ಕಟ್ಟಡ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು,  ಸಚಿನ್ ನೆರವಿನಿ೦ದ ಶಾಲೆ ಅಭೀವೃದ್ಧಿ ಕಾಣುತ್ತಿರುವುದಕ್ಕೆ ಶಾಲಾ ಸಿಬ್ಬ೦ದಿ ಮತ್ತು ವಿದ್ಯಾಥಿ೯ಗಳು ಅಚ್ಚರಿಯೊಂದಿಗೆ ಸಂತಸಗೊ೦ಡಿದ್ದಾರೆ ಎ೦ದು ಶಾಲೆಯ ಮುಖ್ಯೋಪಧ್ಯಾಯ ಉತ್ತಮ್  ಕುಮಾರ್ ಮೊಹಾ೦ತಿ ತಿಳಿಸಿದ್ದಾರೆ. ಅಲ್ಲದೆ 50 ವಷ೯ಗಳ ಇತಿಹಾಸ ಹೊ೦ದಿರುವ ಈ ಶಾಲೆಯ ಹೊಸ ವ್ಯವಸ್ಥೆಗಳ ಉದ್ಘಾಟನೆಗೆ ಸಚಿನ್ ಅವರನ್ನೇ ಆಹ್ವಾನಿಸಲು ನಿಧ೯ರಿಸಲಾಗಿದೆ ಎಂದು  ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com