ಕೂದಲು ಹರಾಜಿನಿಂದ ತಿಮ್ಮಪ್ಪನ ದೇಗುಲಕ್ಕೆ 5.71 ಕೋಟಿ ಆದಾಯ!

ವಿಶ್ವದಲ್ಲೇ ಅತೀ ಹೆಚ್ಚು ಆದಾಯ ಗಳಿಸುವ ಶ್ರೀಮಂತ ದೇಗುಲ ತಿರುಪತಿ ತಿರುಮಲ ದೇವಾಲಯ ಮತ್ತೊಂದು ದಾಖಲೆ ಬರೆದಿದ್ದು, ತಲೆಕೂದಲು ಹರಾಜಿನಿಂದ ಬರುವ ಆದಾಯ ಈ ಬಾರಿ ದಾಖಲೆ ಬರೆದಿದೆ...
ತಿರುಪತಿಯಲ್ಲಿ ತಲೆಕೂದಲು ಅರ್ಪಣೆ (ಸಂಗ್ರಹ ಚಿತ್ರ)
ತಿರುಪತಿಯಲ್ಲಿ ತಲೆಕೂದಲು ಅರ್ಪಣೆ (ಸಂಗ್ರಹ ಚಿತ್ರ)

ತಿರುಪತಿ‌: ವಿಶ್ವದಲ್ಲೇ ಅತೀ ಹೆಚ್ಚು ಆದಾಯ ಗಳಿಸುವ ಶ್ರೀಮಂತ ದೇಗುಲ ತಿರುಪತಿ ತಿರುಮಲ ದೇವಾಲಯ ಮತ್ತೊಂದು ದಾಖಲೆ ಬರೆದಿದ್ದು, ತಲೆಕೂದಲು ಹರಾಜಿನಿಂದ ಬರುವ ಆದಾಯ ಈ  ಬಾರಿ ದಾಖಲೆ ಬರೆದಿದೆ.

ಮೂಲಗಳ ಪ್ರಕಾರ ತಿರುಮಲ ತಿರುಪತಿ ದೇವಸ್ಥಾನ ಏಪ್ರಿಲ್‌ ತಿಂಗಳಲ್ಲಿ ಕೂದಲು ಮಾರಾಟದಿಂದ ರು.5.71 ಕೋಟಿ ಆದಾಯ ಗಳಿಸಿದ್ದು, ಇದು ಕೂದಲು ಮಾರಾಟದಿಂದ ಬಂದ ಏಪ್ರಿಲ್  ತಿಂಗಳ ಗರಿಷ್ಠ ಆದಾಯ ಗಳಿಕೆಯಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಮಂಗಳವಾರ ದೇಗುಲದ ಮಂಡಳಿ ಸಭೆಯಲ್ಲಿ ಮಾತನಾಡಿದ ಟಿಟಿಡಿ ಅಧ್ಯಕ್ಷ ಡಾ. ಚದಲವಾಡ ಕೃಷ್ಣಮೂರ್ತಿ  ಅವರು, ಕೂದಲು ಮಾರಾಟದಿಂದ ಬಂದ ಏಪ್ರಿಲ್ ತಿಂಗಳ ಗರಿಷ್ಠ ಆದಾಯ ಇದಾಗಿದೆ ಎಂದು ತಿಳಿಸಿದರು.

ಅಂತೆಯೇ ದೇಗುಲದ ಒಟ್ಟಾರೆ ಆದಾಯದಲ್ಲಿ ತಿರುಪತಿಯ ಬಿಐಆರ್‌ಆರ್‌ಡಿ ಆಸ್ಪತ್ರೆಯಲ್ಲಿ ರು.4.22 ಕೋಟಿ ವೆಚ್ಚದಲ್ಲಿ ಆರು ಶಸ್ತ್ರಚಿಕಿತ್ಸೆ ಘಟಕಗಳನ್ನು ನಿರ್ಮಿಸಲು ಮಂಡಳಿ ಒಪ್ಪಿಗೆ  ಸೂಚಿಸಿತು. ಇನ್ನು ಅಲಿಪಿರಿ ಸಮೀಪ ರು14.5 ಕೋಟಿ ವೆಚ್ಚದಲ್ಲಿ ಸ್ಟುಡಿಯೋ ಮತ್ತು ಕಚೇರಿ ಹಾಗೂ ಪ್ರಕಾಶಂ ಜಿಲ್ಲೆಯ ಕೊಂಡಪಿಯಲ್ಲಿ ರು.1.25 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ  ನಿರ್ಮಿಸಲು ಮಂಡಳಿ ನಿರ್ಧರಿಸಿದೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com