ಮಹಿಳೆಯರು ಅವಮಾನದ ವಿರುದ್ಧ ಸಿಡಿದೇಳಬೇಕು: ಸ್ಮೃತಿ ಇರಾನಿ

ಟ್ವಿಟ್ ರ್ ನಲ್ಲಿ ಡಿಯರ್ ಪದ ಬಳಕೆ ಕುರಿತು ಬಿಹಾರ ಶಿಕ್ಷಣ ಸಚಿವ ಅಶೋಕ್ ಚೌಧರಿಯನ್ನು ಕೇಂದ್ರ ಮಾನವ ಸಂಪನ್ಮೂಲ...
ಕೇಂದ್ರ ಸಚಿವೆ ಸ್ಮೃತಿ ಇರಾನಿ
ಕೇಂದ್ರ ಸಚಿವೆ ಸ್ಮೃತಿ ಇರಾನಿ

ನವದೆಹಲಿ: ಟ್ವಿಟ್ ರ್ ನಲ್ಲಿ ಡಿಯರ್ ಪದ ಬಳಕೆ ಕುರಿತು ಬಿಹಾರ ಶಿಕ್ಷಣ ಸಚಿವ ಅಶೋಕ್ ಚೌಧರಿಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ತರಾಟೆಗೆ ತೆಗೆದುಕೊಂಡಿದ್ದು ಹಳೆಯ ಸುದ್ದಿ.

ನಿನ್ನೆ ರಾತ್ರಿ ಸ್ಮೃತಿ ಇರಾನಿ ಫೇಸ್ ಬುಕ್ ಪುಟದಲ್ಲಿ ಸುದೀರ್ಘವಾದ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಪ್ರತಿಯೊಬ್ಬರೂ ಅದರಲ್ಲೂ ಮಹಿಳೆಯರು ಮನಬಿಚ್ಚಿ ಮಾತನಾಡಬೇಕು ಎಂದು ಒತ್ತಿ ಹೇಳಿದ್ದಾರೆ. ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮಹಿಳೆಯರು ಮತ್ತು ಯುವತಿಯರು ತಮಗೆ ಅವಮಾನವಾದರೆ ಅದನ್ನು ಧೈರ್ಯದಿಂದ ಎದುರಿಸಬೇಕು. ಮಹಿಳೆ ಬಾಲ್ಯದಿಂದ ಅನೇಕ ಸಂಕಷ್ಟ, ಸವಾಲುಗಳನ್ನು ಎದುರಿಸಿ ಬದುಕಬೇಕಾಗುತ್ತದೆ.

ತಾನು ಕೂಡ ಜೀವನದಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸಿದ್ದು, ಮಾನವ ಸಂಪನ್ಮೂಲ ಸಚಿವೆಯಾದ ನಂತರ ಅನೇಕ ಅವಮಾನಗಳನ್ನು ಎದುರಿಸಬೇಕಾಯಿತು. ಸಾಮಾಜಿಕ ತಾಣದಲ್ಲಿ ಟ್ರೋಲ್ ಗೆ ಒಳಗಾಗಿದ್ದೆ ಎಂದು ಬರೆದಿದ್ದಾರೆ. ಇವೆಲ್ಲವುಗಳನ್ನು ಎದುರಿಸಿ ಸಚಿವೆಯಾಗಿ ನನ್ನ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದೇನೆ ಎನ್ನುತ್ತಾರೆ ಅವರು.
ಫೇಸ್ ಬುಕ್ ನಲ್ಲಿ ಪೋಸ್ಟ್ ನ ಕೊನೆಗೆ ತಾವು ಮಾನವ ಸಂಪನ್ಮೂಲ ಸಚಿವೆಯಾಗಿ ಮಾಡಿರುವ ಕೆಲಸಗಳನ್ನು ಪಟ್ಟಿ ಮಾಡಿದ್ದು, ಕೊನೆಗೆ Aunty National' ಎಂದು ಬರೆಯುವ ಮೂಲಕ ಕೊನೆಗೊಳಿಸಿದ್ದಾರೆ.

ಬಿಹಾರದ ಶಿಕ್ಷಣ ಸಚಿವ ಅಶೋಕ್ ಚೌಧರಿ ಮೊನ್ನೆ ಮಂಗಳವಾರ ಟ್ವಿಟ್ಟರ್ ನಲ್ಲಿ ಡಿಯರ್ ಸ್ಮೃತಿ ಇರಾನಿಜಿ, ನಾವು ಯಾವಾಗ ಹೊಸ ಶಿಕ್ಷಣ ನೀತಿಯನ್ನು ಪಡೆಯುತ್ತೇವೆ? ನಿಮ್ಮ ಕ್ಯಾಲೆಂಡರ್ ನಲ್ಲಿ 2015 ವರ್ಷ ಯಾವಾಗ ಕೊನೆಯಾಗುತ್ತದೆ ಎಂದು ಪ್ರಶ್ನಿಸಿದ್ದರು.
ಸಚಿವರು ಡಿಯರ್ ಶಬ್ದ ಬಳಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮಹಿಳೆಯರಿಗೆ ಯಾವಾಗದಿಂದ ಡಿಯರ್ ಎಂದು ಶಬ್ದ ಬಳಸಲು ನೀವು ಆರಂಭಿಸಿದ್ದು, ನಿಮಗೆ ಮಹಿಳೆಯರಿಗೆ ಗೌರವ ನೀಡುವುದಕ್ಕೆ ಬರುವುದಿಲ್ಲವೆ ಎಂದು ಕೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com