

ನವದೆಹಲಿ: ಭಾರತ ಪ್ರವಾಸ ಕೈಗೊಂಡಿರುವ ಥೈಲ್ಯಾಂಡ್ ಪ್ರಧಾನಿ ಪ್ರಯುತ್ ಚಾನ್ ಒ ಚಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲಿದ್ದು, ದಕ್ಷಿಣಾ ಚೀನಾ ಸಮುದ್ರದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ದಕ್ಷಿಣ ಚೀನಾ ಸಮುದ್ರದ ವಿಷಯದ ಹೊರತಾಗಿ ಕಡಲ ಭದ್ರತೆ ಸಹಕಾರ, ಭಯೋತ್ಪಾದನೆ ನಿಗ್ರಹ, ವ್ಯಾಪಾರ ವಹಿವಾಟು ಸಂಬಂಧ ವೃದ್ಧಿ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಮೂರು ದಿನಗಳ ಭಾರತ ಭೇಟಿ ಕೈಗೊಂಡಿರುವ ಥೈಲ್ಯಾಂಡ್ ಪ್ರಧಾನಿ ಪ್ರಧಾನಿ ಮೋದಿ ಭೇಟಿ ನಂತರ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರನ್ನು ಭೇಟಿ ಮಾಡಲಿದ್ದಾರೆ.
ಥೈಲ್ಯಾಂಡ್ ಪ್ರಧಾನಿ ಭೇಟಿಯ ಭಾಗವಾಗಿ ಭಾರತ- ಥೈಲ್ಯಾಂಡ್ ಜಂಟಿ ಉದ್ಯಮ ವೇದಿಕೆಯ ಮೊದಲ ಸಭೆ ನಡೆಯಲಿದ್ದು, ಉಭಯ ದೇಶಗಳ ನಡುವೆ ವ್ಯಾಪಾರ ವಹಿವಾಟು ಸಂಬಂಧ ವೃದ್ಧಿಗೆ ಈ ಸಭೆ ನೆರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.