ಎಲಿಫೆಂಟ್ ಅಕ್ಷರ ತಪ್ಪಾಗಿ ಬರೆದು ಟೀಕೆಗೆ ಗುರಿಯಾದ ಗುಜರಾತ್ ಸಚಿವ

ಗುಜರಾತ್ ನ ಸಚಿವರೊಬ್ಬರು ಆಂಗ್ಲ ಭಾಷೆಯ ಎಲಿಫೆಂಟ್ ಅಕ್ಷರವನ್ನು ತಪ್ಪಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೆ ಈಡಾದ ಘಟನೆ ಶುಕ್ರವಾರ ನಡೆದಿದೆ...
ಶಾಲೆಗೆ ಭೇಟಿ ನೀಡಿದ್ದ ಸಚಿವ ಶಂಕರ್ ಚೌದರಿ (ಎಎನ್ ಐ ಚಿತ್ರ)
ಶಾಲೆಗೆ ಭೇಟಿ ನೀಡಿದ್ದ ಸಚಿವ ಶಂಕರ್ ಚೌದರಿ (ಎಎನ್ ಐ ಚಿತ್ರ)
Updated on: 

ಅಹ್ಮದಾಬಾದ್: ಗುಜರಾತ್ ನ ಸಚಿವರೊಬ್ಬರು ಆಂಗ್ಲ ಭಾಷೆಯ ಎಲಿಫೆಂಟ್ ಅಕ್ಷರವನ್ನು ತಪ್ಪಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೆ ಈಡಾದ ಘಟನೆ ಶುಕ್ರವಾರ ನಡೆದಿದೆ.

ಗುಜರಾತ್​ನ ರಾಜ್ಯ ಸಚಿವ ಶಂಕರ್ ಚೌಧರಿ ಸ್ಥಳೀಯ ಶಾಲೆಯೊಂದಕ್ಕೆ ಭೇಟಿ ನೀಡಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ವೇಳೆ ಶಾಲ ಫಲಕದಲ್ಲಿ ಇಂಗ್ಲಿಷ್​ನ ಸಾಮಾನ್ಯ ಪದ ಎಲಿಫೆಂಟ್ ಸ್ಪೆಲ್ಲಿಂಗ್  ತಪ್ಪಾಗಿ ಬರೆದಿದ್ದಾರೆ. ಇಂಗ್ಲೀಷ್ ನ 'elephant' ಅಕ್ಷರವನ್ನು "elephent"ಎಂದು ತಪ್ಪಾಗಿ ಬರೆದ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಈ ಫೋಟೊ  ವೈರಲ್ ಆಗಿದೆ.

ಶಂಕರ್ ಚೌದರಿ ಅವರ ಈ ಪ್ರಮಾಣದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಇದಕ್ಕೆ ತೇಪೆ ಹಚ್ಚಲು ಮುಂದಾಗಿರುವ ಅವರು, ತಾನು ಮಕ್ಕಳನ್ನು ಪರೀಕ್ಷೆ ಮಾಡಲು  ಬೇಕೆಂದೇ ಈ ರೀತಿ ಎಲಿಫೆಂಟ್ ಪದವನ್ನು ತಪ್ಪಾಗಿ ಬರೆದಿರುವುದಾಗಿ ಹೇಳಿದ್ದಾರೆ. ವಸತಿ, ಆರೋಗ್ಯ ಮತ್ತು ಸಾರಿಗೆ ಸಚಿವರಾಗಿರುವ ಶಂಕರ್ ಚೌಧರಿ ಶಾಲಾ ಆರಂಭೋತ್ಸವದ ಅಂಗವಾಗಿ  ಇತ್ತೀಚೆಗೆ ದಿಸಾ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು.

ಚುನಾವಣಾ ಪೂರ್ವದಲ್ಲಿ ತಾವು ಎಂಬಿಎ ಪದವಿ ಪಡೆದಿರುವುದಾಗಿ ಶಂಕರ್ ಚೌದರಿ ಅವರು ತಮ್ಮ ನಾಮಪತ್ರ ಸಲ್ಲಿಕೆ ವೇಳೆ ನಮೂದಿಸಿದ್ದರು. ಆದರೆ ಕೆಲ ಸಾಮಾಜಿಕ ಕಾರ್ಯಕರ್ತರು  ಶಂಕರ್ ಚೌದರಿ ಅವರು ಪದವಿ ಪ್ರಮಾಣ ಪತ್ರ ನಕಲಿ ಎಂದು ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com