ಮಹಿಳೆಯ ಹೊಟ್ಟೆಯಿಂದ 6 ಇಂಚು ಉದ್ದದ ಚಾಕು ತೆಗೆದ ವೈದ್ಯರು

ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಮಹಿಳೆಯ ಹೊಟ್ಟೆಯಿಂದ 6 ಇಂಚು ಉದ್ದದ ಚಾಕು ತೆಗೆದಿದ್ದಾರೆ. ...
ಮಹಿಳೆ ಹೊಟ್ಟಿಯಲ್ಲಿದ್ದ 6 ಇಂಚು ಉದ್ದದ ಚಾಕು
ಮಹಿಳೆ ಹೊಟ್ಟಿಯಲ್ಲಿದ್ದ 6 ಇಂಚು ಉದ್ದದ ಚಾಕು

ಹೈದರಾಬಾದ್: ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಮಹಿಳೆಯ ಹೊಟ್ಟೆಯಿಂದ 6 ಇಂಚು ಉದ್ದದ ಚಾಕು ತೆಗೆದಿದ್ದಾರೆ.

ಮೇಡಕ್ ಜಿಲ್ಲೆಯ ನಾರಾಯಂಕವಾಡ್ ನ ಸ್ವಪ್ನ ಎಂಬಾಕೆ ಜೂನ್ 11 ರಂದು 6 ಇಂಚು ಉದ್ದ ಚಾಕು ನುಂಗಿದ್ದರು, ಆ ಚಾಕು ಅನ್ನನಾಳದಿಂದ ಹೋಗಿ ಹೊಟ್ಟೆ ಸೇರಿತ್ತು. ಹಿಡಿಕೆ ಇರದ ಚಾಕು ನುಂಗಿದ್ದರು. ಅದೃಷ್ಟವಶಾತ್ ಅನ್ನನಾಳ ಸೇರಿದಂತೆ, ಯಾವುದೇ ಅಂಗಗಳಿಗೆ ಹಾನಿಯಾಗಿರಲಿಲ್ಲ.

ಎಕ್ಸ್ ರೇ ಮಾಡಿದ ವೈದ್ಯರು ಹೊಟ್ಟೆಯೊಳಗೆ ವಿದೇಶಿ ವಸ್ತು ಇರುವುದನ್ನು ಗಮನಿಸಿದರು. ಸಾಮಾನ್ಯವಾಗಿ ವಿದೇಶಿ ವಸ್ತುಗಳು ದೇಹ ಸೇರಿದಾಗ ನಿರ್ಧಿಷ್ಟ ಔಷಧಿ ನೀಡಿದರೇ ಸೇರಿರುವ ವಸ್ತು ದೇಹದಿಂದ ಹೊರ ಬರುತ್ತದೆ.

ವೈದ್ಯರು ಚಾಕು ಬರುವಂತೆ ಎಷ್ಟೇ ಔಷಧಿ ನೀಡಿದರೂ ಚಾಕು ಬರಲಿಲ್ಲ, ಆಕೆಗೆ ಆಹಾರ ನೀಡಿದಾಗ ಹೊಟ್ಟೆನೋವು  ಬರುತ್ತಿತ್ತು. ಆರು ದಿನಗಳ ಕಾಲ ಕಾದ ವೈದ್ಯರು ಚಾಕು ಹೊಟ್ಟೆಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಚಾಕು ಹೆಚ್ಚು ದಿನ ಹೊಟ್ಟೆ ಒಳಗೆ ಇದ್ದರೆ ಜಠರಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಲು ನಿರ್ಧರಿಸಿದ್ದಾಗಿ ಅಸಿಸ್ಟೆಂಟ್ ಪ್ರೊಪೆಸರ್  ಡಾ. ಸಿದ್ದಪೇಠ್ ರಮೇಶ್ ತಿಳಿಸಿದರು.

ಸತತ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ ಹೈದರಾಬಾದ್ ನ ಗಾಂಧಿ ಆಸ್ಪತ್ರೆ ವೈದ್ಯರು ಜೂನ್ 17 ರಂದು ಶಸ್ತ್ರ ಚಿಕಿತ್ಸೆ ನಡೆಸಿ ಚಾಕು ಹೊರ ತೆಗೆದಿದ್ದಾರೆ. ರೋಗಿಯ ಆರೋಗ್ಯ ಸುಧಾರಿಸಿದ್ದು ಇನ್ನೆರು ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com