ಉ.ಪ್ರದೇಶದಲ್ಲಿ ಸಿಎಂ ಅಭ್ಯರ್ಥಿಯಾಗಲು ಶೀಲಾ ದಿಕ್ಷಿತ್ ನಕಾರ

ಮುಂಬರುವ 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಯಾಗಲು ಮಾಜಿ ದೆಹಲಿ ಮುಖ್ಯಮಂತ್ರಿ ಹಾಗೂ...
ಶೀಲಾ ದಿಕ್ಷಿತ್
ಶೀಲಾ ದಿಕ್ಷಿತ್
ನವದೆಹಲಿ: ಮುಂಬರುವ 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಯಾಗಲು ಮಾಜಿ ದೆಹಲಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕಿ ಶೀಲಾ ದಿಕ್ಷಿತ್ ಅವರು ನಿರಾಕರಿಸಿದ್ದಾರೆ.
ಮಾಧ್ಯಮಗಳ ವರದಿಯ ಪ್ರಕಾರ, ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪ್ರಮುಖ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಶೀಲಾ ದಿಕ್ಷಿತ್ ಅವರು ಪ್ರಮುಖ ಪಾತ್ರ ವಹಿಸಲಿದ್ದು, ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸುವಂತೆ ಉತ್ತರ ಪ್ರದೇಶ ಚುನಾವಣೆ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಹೈಕಮಾಂಡ್ ಗೆ ಮನವಿ ಮಾಡಿದ್ದರು. ಇದನ್ನು ಪುರಷ್ಕರಿಸಿದ ಕಾಂಗ್ರೆಸ್ ಹೈಕಮಾಂಡ್ ಸಿಎಂ ಅಭ್ಯರ್ಥಿಯಾಗುವಂತೆ ಶೀಲಾ ದಿಕ್ಷಿತ್ ಅವರಿಗೆ ಆಹ್ವಾನ ನೀಡಿತ್ತೆ. ಆದರೆ ಹೈಕಮಾಂಡ್ ಆಹ್ವಾನವನ್ನು ಅವರು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಮಂದಿರ-ಮಂಡಲ್ ರಾಜಕೀಯದಿಂದಾಗಿ ಇತ್ತೀಚಿಗ ಬ್ರಾಹ್ಮಣರ ಮತಗಳು ಬಿಜೆಪಿಗೆ ಶಿಫ್ಟ್ ಆಗಿದ್ದು, ಆ ಮತಗಳನ್ನು ಸೆಳೆಯಲು ಶೀಲಾ ದಿಕ್ಷಿತ್ ಬೇಕು ಎಂದು ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದರು. ಆದರೆ ಇತ್ತೀಚಿಗೆ ಸುಮಾರು 600 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರನ್ನು ಸಕ್ರಿಯೆ ರಾಜಕೀಯಕ್ಕೆ ಕರೆ ತನ್ನಿ ಎಂದು ಪ್ರಶಾಂತ್ ಕಿಶೋರ್ ಗೆ ಒತ್ತಾಯಿಸಿದ್ದಾರೆ. 
78 ವರ್ಷದ ಶೀಲಾ ದಿಕ್ಷಿತ್ ಅವರು 1999ರಿಂದ 2014ರವರೆಗೆ ಸತತ ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com