
ನವದೆಹಲಿ: ವಾಟ್ಸ್ಅಪ್ ನಿಷೇಧ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಬುಧವಾರ ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ದೇಶದ ಭದ್ರತೆ ಹಿತಾಸಕ್ತಿಯಿಂದ ವಾಟ್ಸ್ಅಪ್ ಸೇರಿದಂತೆ ಇನ್ನಿತರೆ ಮೆಸೆಂಜರ್ ಆ್ಯಪ್ ಗಳನ್ನು ನಿಷೇಧಿಸಬೇಕೆಂದು ಕೋರಿ ಹರಿಯಾಣ ಮೂಲದ ಆರ್ ಟಿಐ ಕಾರ್ಯಕರ್ತ ಸುಧೀರ್ ಯಾದವ್ ಎಂಬುವವರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದರು.
ಸಾಮಾಜಿಕ ಜಾಲತಾಣಗಳ ಸಂದೇಶ ರವಾನೆ ವ್ಯವಸ್ಥೆಯಾಗಿರುವ ವಾಟ್ಸ್ ಅಪ್, ವೈಬರ್, ಹೈಕ್ ಅಪ್ಲಿಕೇಶನ್ ಗಳು ದೇಶದ ಭದ್ರತೆಗೆ ಧಕ್ಕೆಯುಂಟು ಮಾಡುತ್ತಿದ್ದು, ಈ ಅಪ್ಲಿಕೇಶನ್ ಗಳಲ್ಲಿ ಭಯೋತ್ಪಾದಕರು, ಅಪರಾಧಿಗಳು ಸಂದೇಶ ರವಾನಿಸುವ ಮೂಲಕ ದಾಳಿಗೆ ಸಂಚು ರೂಪಿಸುತ್ತಿದ್ದಾರೆಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಈ ಅರ್ಜಿಯನ್ನು ಇಂದು ಪರಿಶೀಲನೆ ನಡೆಸಿರುವ ಸುಪ್ರೀಂ ಅರ್ಜಿಯನ್ನು ತಿರಸ್ಕರಿಸಿದ್ದು, ಸಮಸ್ಯೆ ಕುರಿತಂತೆ ದೂರಸಂಪರ್ಕ ವಿವಾದಗಳ ನ್ಯಾಯಿಕ ಪ್ರಾಧಿಕಾರ (ಟಿಡಿಎಸ್ಎಟಿ)ವನ್ನು ಸಂಪರ್ಕಿಸುವಂತೆ ಅರ್ಜಿದಾರನಿಗೆ ತಿಳಿಸಿದೆ.
Advertisement