ಸ್ವಾತಿ ಕೊಲೆ ಪ್ರಕರಣ: ಪೊಲೀಸರಿಗೆ ಸಿಕ್ತು ನೂತನ ಸಿಸಿಟಿವಿ ದೃಶ್ಯಾವಳಿ

ನುಂಗಂಬಾಕ್ಕಂ ರೈಲು ನಿಲ್ದಾಣದಲ್ಲಿ ಇಸ್ಫೋಸಿಸ್ ಉದ್ಯೋಗಿ ಎಸ್. ಸ್ವಾತಿ ಕೊಲೆ ಪ್ರಕರಣ ಪೊಲೀಸರಿಗೆ ದಿನದಿಂದ ದಿನಕ್ಕೆ ಕಗ್ಗಂಟಾಗಿ ಪರಿಣಮಿಸುತ್ತಿದ್ದು, ಈ ನಡುವೆ...
ಸ್ವಾತಿ-ಸಿಸಿಟಿವಿ ದೃಶ್ಯಾವಳಿ
ಸ್ವಾತಿ-ಸಿಸಿಟಿವಿ ದೃಶ್ಯಾವಳಿ
Updated on
ಚೆನ್ನೈ: ನುಂಗಂಬಾಕ್ಕಂ ರೈಲು ನಿಲ್ದಾಣದಲ್ಲಿ ಇಸ್ಫೋಸಿಸ್ ಉದ್ಯೋಗಿ ಎಸ್. ಸ್ವಾತಿ ಕೊಲೆ ಪ್ರಕರಣ ಪೊಲೀಸರಿಗೆ ದಿನದಿಂದ ದಿನಕ್ಕೆ ಕಗ್ಗಂಟಾಗಿ ಪರಿಣಮಿಸುತ್ತಿದ್ದು, ಈ ನಡುವೆ ಪೊಲೀಸರಿಗೆ ಹೊಸದೊಂದು ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು, ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.
ನುಂಗಂಬಾಕ್ಕಂ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದ ಪೊಲೀಸರಿಗೆ ಇದೀಗ ರಸ್ತೆ ಮೇಲೆ ಯುವಕನೊಬ್ಬ ಸ್ವಾತಿ ಕೊಲೆಯಾದ ಸಮಯದಲ್ಲೇ ನೀಲಿ ಶರ್ಟ್ ಹಾಕಿಕೊಂಡು ಬೈಕ್ ನಲ್ಲಿ ಹೊರಟ ದೃಶ್ಯಾವಳಿಗಳು ಲಭ್ಯವಾಗಿದ್ದು, ಶಂಕಿತನ ಮುಖ ಚರ್ಯೆ ಹಾಗೂ ಬೈಕ್ ನ ನಂಬರ್ ಪ್ಲೇಟ್ ಅಸ್ಪಷ್ಟವಾಗಿದೆ. 
ಪ್ರತ್ಯಕ್ಷದರ್ಶಿಗಳ ಹೇಳಿಕೆ ಮೇರೆಗೆ ಕೊಲೆಯಾದ ಬಳಿಕ ರೈಲ್ವೆ ನಿಲ್ದಾಣದಿಂದ ಶಂಕಿತ ಯುವಕ ಹೊರಹೋಗುತ್ತಿದ್ದ ಸಿಸಿಟಿವಿ ದೃಶ್ಯವಳಿಗಳನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ಪೊಲೀಸರು ಆರೋಪಿಯ ಸೆರೆಗೆ ವ್ಯೂಹ ರಚಿಸಿದ್ದರು. ಇದೀಗ ಇದೇ ವೇಳೆ ಬೈಕ್ ಮೇಲೆ ಸವಾರನೊಬ್ಬ ಅದೇ ಸಮಯಕ್ಕೆ ಗೆರೆ ಇರುವ ನೀಲಿ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಆಕಿಕೊಂಡಿರುವ ದೃಶ್ಯಾವಳಿಗಳಿಂದ ಪೊಲೀಸರು ಗೊಂದಲಕ್ಕೆ ಸಿಲುಕುವಂತಾಗಿದೆ. 
ಸ್ವಾತಿ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚೆನ್ನೈ ಪೊಲೀಸರು 10 ವಿಶೇಷ ತಂಡಗಳನ್ನು ರಚಿಸಿ ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com