ಆದಾಗ್ಯೂ, ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ ಮಲ್ಯ ಅವರು, 28 ಹರೆಯದಲ್ಲಿ ಯುಬಿ ಗ್ರೂಪ್‌ನ ಮಾಲೀಕನಾಗಿದ್ದೆ. ನಾನೇನೂ ಸಾಬೀತು ಪಡಿಸಬೇಕಿಲ್ಲ. ನಾನು ಭಾರತದ ದೊಡ್ಡ ಬೀರ್ ಕಂಪನಿಯನ್ನು ಸ್ಥಾಪಿಸಿದೆ. ದೊಡ್ಡ ಸ್ಪಿರಿಟ್ ಕಂಪನಿಯನ್ನು ಕಟ್ಟಿದೆ. ಆದ್ರೆ, ಕಿಂಗ್ ಫಿಶರ್ ಏರ್‌ಲೈನ್ಸ್‌ನಲ್ಲಿ ಎಡವಿದೆ. ಅದಕ್ಕೆ ಏನು ಕಾರಣ ಎಂಬುದರ ಬಗ್ಗೆ ದೊಡ್ಡ ಪಟ್ಟಿಯೇ ಇದೆ ಎಂದು ಸಂದರ್ಶನವೊಂದರಲ್ಲಿ ಮಲ್ಯ ಹೇಳಿದ್ದಾರೆ.