

ಕೋಯಿಕ್ಕೋಡ್ : ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಕರೆ ನೀಡಿರುವ ಕೇರಳ ಹೈಕೋರ್ಟ್ ನ ನ್ಯಾ.ಕೆಮಲ್ ಪಾಶಾ ಮಹಿಳೆಯರಿಗೇಕೆ ನಾಲ್ಕು ಗಂಡದಿರು ಇರಬಾರದುಎಂದು ಪ್ರಶ್ನಿಸಿದ್ದಾರೆ.
ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸುವ ವಿಷಯದ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿವಾಹವಾಗುವ ವರ ವಧುವಿನ ಕುಟುಂಬಕ್ಕೆ ವಧುದಕ್ಷಿಣೆ ನೀಡಬೇಕೆಂದು ಕುರಾನ್ ಹೇಳಿದೆ. ನಮ್ಮ ದೇಶದಲ್ಲಿ ಮಹಿಳೆಯರು ದುರ್ಬಲವಾಗಿರುವ ಕಾರಣ ಈ ಅಂಶ ಅನ್ವಯವಾಗುತ್ತಿಲ್ಲ ಎಂದು ನ್ಯಾ.ಕೆಮಾಲ್ ಪಾಶಾ ಹೇಳಿದ್ದಾರೆ.
ಪುರುಷರು ನಾಲ್ವರು ಪತ್ನಿಯರನ್ನು ಹೊಂದಿರಬಹುದಾದರೆ, ಮಹಿಳೆಯರಿಗೇಕೆ ನಾಲ್ವರು ಗಂಡಂದಿರು ಇರಬಾರದು ಎಂದು ಕೇಳಿದ್ದಾರೆ. ವರದಕ್ಷಿಣೆ ಪದ್ಧತಿಯನ್ನು ನಿರ್ನಾಮ ಮಾಡಲು ಸಾಮಾಜದಲ್ಲಿ ಜಾಗೃತಿ ಮೂಡಿಸುವುದೊಂದೇ ಮಾರ್ಗ ಎಂದು ಅಭಿಪ್ರಾಯಪಟ್ಟಿರುವ ನ್ಯಾ. ಕೆಮಾಲ್ ಪಾಶಾ, ಮಹಿಳೆಯರು ವರದಕ್ಷಿಣೆ ಮೂಲಕ ನಡೆಯುವ ವಿವಾಹಗಳನ್ನು ವಿರೋಧಿಸಬೇಕು ಎಂದು ಕರೆ ನೀಡಿದ್ದಾರೆ.