ಕಳ್ಳಭಟ್ಟಿ ತಯಾರಿಸಿದರೆ ಗಲ್ಲು ಶಿಕ್ಷೆ!

ಮದ್ಯಮಾರಾಟ ನಿಷೇಧಿಸಿ ಈಗಾಗಲೇ ಕಾನೂನು ರೂಪಿಸಿರುವ ಬಿಹಾರ ಸರ್ಕಾರ, ಇದೀಗ ಕಳ್ಳಭಟ್ಟಿ ತಯಾರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಇನ್ನು ಮುಂದೆ ಕಳ್ಳಭಟ್ಟಿ...
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಪಾಟ್ನ: ಮದ್ಯಮಾರಾಟ ನಿಷೇಧಿಸಿ ಈಗಾಗಲೇ ಕಾನೂನು ರೂಪಿಸಿರುವ ಬಿಹಾರ ಸರ್ಕಾರ, ಇದೀಗ ಕಳ್ಳಭಟ್ಟಿ ತಯಾರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಇನ್ನು ಮುಂದೆ ಕಳ್ಳಭಟ್ಟಿ ತಯಾರಿಸುವವರಿಗೆ ಗಲ್ಲು ಶಿಕ್ಷೆ ವಿಧಿಸುವುದಾಗಿ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ 2016ರ ಏಪ್ರಿಲ್ 1 ರಿಂದ ಬಿಹಾರದಲ್ಲಿ ದೇಶಿಯ ಮದ್ಯಮಾರಾಟ ನಿಷೇಧ ಕಾನೂನು ಜಾರಿ ಮಾಡಿ ಕೆಲ ಸಮಯದ ಹಿಂದೆ ಜೆಡಿಯು ಸರ್ಕಾರ ಆದೇಶ ಹೊರಡಿಸಿತ್ತು.

ಈ ಕಾನೂನು ಜಾರಿಯಾದ ಬಳಿಕ ಕಳ್ಳಭಟ್ಟಿ ತಯಾರಿಕೆಯಲ್ಲಿ ಭಾಗಿಯಾಗಿದ್ದವರಿಗೆ ಗಲ್ಲು ಶಿಕ್ಷೆ ನೀಡಬಹುದಾದಂಥ ಕಾನೂನು ಕೂಡ ಜಾರಿಯಾಗಲಿದೆ. ಈ ಕುರಿತ ಮಸೂದೆಯನ್ನು ಪ್ರಸಕ್ತ ನಡೆಯುತ್ತಿರುವ ಬಜೆಟ್ ಅಧಿವೇಶನದ ವೇಳೆಯೇ ಆಂಗೀಕರಿಸಲಾಗುವುದು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಕಟಿಸಿದ್ದಾರೆ.

ಏ.1ರಿಂದ ದೇಶೀಯ ಮದ್ಯಗಳ ಮಾರಾಟಕ್ಕೆ ಪೂರ್ಣ ನಿಷೇಧವಿರಲಿದೆ. ಆದರೆ, ದೇಶೀಯವಾಗಿ ಉತ್ಪಾದಿಸಿದ ವಿದೇಶಿ ಮದ್ಯಗಳನ್ನು ಆಯ್ದ ಮಳಿಗೆಗಳಲ್ಲಿ ಮಾತ್ರವೇ ಮಾರಾಟ ಮಾಡಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com