ಮಾನವ ಕಳ್ಳಸಾಗಣೆ ತಡೆಗೆ ಭಾರತ-ಬಹ್ರೇನ್ ನಡುವೆ ಒಪ್ಪಂದ

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಏಪ್ರಿಲ್ ನ ಮೊದಲ ವಾರದಲ್ಲಿ ಬಹ್ರೇನ್ ಗೆ ಭೇಟಿ ನೀಡುತ್ತಿದ್ದು, ಮಾನವ ಕಳ್ಳ ಸಾಗಣೆ ತಡೆ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಒಪ್ಪಂದ ನಡೆಯಲಿದೆ.
ಭಾರತ-ಬಹ್ರೇನ್ (ಸಂಗ್ರಹ ಚಿತ್ರ)
ಭಾರತ-ಬಹ್ರೇನ್ (ಸಂಗ್ರಹ ಚಿತ್ರ)

ನವದೆಹಲಿ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಏಪ್ರಿಲ್ ನ ಮೊದಲ ವಾರದಲ್ಲಿ ಬಹ್ರೇನ್ ಗೆ ಭೇಟಿ ನೀಡಲಿದ್ದು, ಮಾನವ ಕಳ್ಳ ಸಾಗಣೆ ತಡೆ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಒಪ್ಪಂದ ನಡೆಯಲಿದೆ.
ಬಹ್ರೇನ್ ನೊಂದಿಗೆ ಒಪ್ಪಂದದ ವಿಷಯದಲ್ಲಿ ಮುಂದುವರೆಯಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಮಾನವ ಕಳ್ಳ ಸಾಗಣೆ ಪ್ರಮುಖವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಕಳ್ಳ ಸಾಗಣೆ ಮಾಡುವುದನ್ನು ತಡೆಗಟ್ಟಲು ಬಹ್ರೇನ್ ನೊಂದಿಗೆ ಒಪ್ಪಂದ ನಡೆಯುತ್ತಿದೆ. ಮಾನವ ಕಳ್ಳ ಸಾಗಾಣೆಗೆ ಸಿಲುಕಿಕೊಂಡಿರುವವರ ರಕ್ಷಣೆ, ವಾಪಸಾತಿಗೂ ಒಪ್ಪಂದದ ಅಂಶಗಳು ನೆರವಾಗಲಿವೆ.
ಎರಡು ದೇಶಗಳಲ್ಲಿರುವ ಮಾನವ ಕಳ್ಳಸಾಗಣೆ ವಿರೋಧಿ ಸೆಲ್ ಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಲಿವೆ ಎಂದು ಕೇಂದ್ರ ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com