ಇಶ್ರಾತ್ ಪ್ರಕರಣ: ಗುಜರಾತ್ ಪೊಲೀಸರ ವಿರುದ್ಧದ ಅರ್ಜಿ ತಿರಸ್ಕೃತ

ಇಶ್ರಾತ್ ಜಹಾನ್ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಇಶ್ರಾತ್ ಜಹಾನ್ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಗುಜರಾತ್ ನಲ್ಲಿ ನಡೆದ ನಕಲಿ ಎನ್ ಕೌಂಟರ್ ನಲ್ಲಿ ಇಶ್ರಾತ್ ಜಹಾನ್ ಳನ್ನು ಹತ್ಯೆ ಮಾಡಲಾಗಿತ್ತು. ಆದರೆ, ನಕಲಿ ಎನ್ ಕೌಂಟರ್ ನಲ್ಲಿ ಗುಜರಾತ್ ಭಾಗಿಯಾಗಿದ್ದು, ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹಾಗೂ ಭಾಗಿಯಾದ ಪೊಲೀಸರನ್ನು ಅಮಾನತುಗೊಳಿಸಬೇಕೆಂದು ಹೇಳಿ ಸುಪ್ರೀಂ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿತ್ತು. ಇದೀಗ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ.

ಅರ್ಜಿ ಪರವಾಗಿ ವಕೀಲ ಎಂ.ಎಲ್. ಶರ್ಮಾ ಅವರು ವಾದ ಮಂಡಿಸುತ್ತಿದ್ದರು. ಈ ವೇಳೆ ಮಾತನಾಡಿದ ನ್ಯಾಯಮೂರ್ತಿ ಪಿ.ಸಿ. ಘೋಷ್ ಮತ್ತು ಅಮಿತವ ರಾಯ್ ಅವರಿದ್ದ ಪೀಠ, ಆರ್ಟಿಕಲ್ 32ರ ಉದ್ದೇಶವೇನಿದೆ. ಆರ್ಟಿಕಲ್ 32 ಅಡಿಯಲ್ಲಿ ಈ ರೀತಿಯ ಪ್ರಕರಣವನ್ನು ದಾಖಲಿಸುವಂತಿಲ್ಲ. ಪ್ರಕರಣ ದಾಖಲಿಸಲೇ ಬೇಕಿಂದಿದ್ದರೆ, ಹೈ ಕೋರ್ಟ್ ಗೆ ಹೋಗಿ ಆರ್ಟಿಕಲ್ 226ರ ಸಂವಿಧಾನದ ಅಡಿಯಲ್ಲಿ ದಾಖಲಿಸಿ ಎಂದು ಹೇಳಿದೆ. ಅಲ್ಲದೆ, ಅರ್ಜಿಯನ್ನು ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com