
ಅಹಮದಾಬಾದ್: ಗುಜರಾತ್ ನ ಸೂರತ್ ಜಿಲ್ಲೆಯಲ್ಲಿರುವ ಕಾಕ್ರಾಪರ್ ಅಣು ವಿದ್ಯುತ್ ಸ್ಥಾವರದ ಒಂದು ಘಟಕದಲ್ಲಿ ಭಾರ ಜಲ ಸೋರಿಕೆಯಾಗಿದ್ದು, ಪ್ರಸ್ತುತ ಸ್ಥಾವರನ್ನು ಸ್ಥಗಿತಗೊಳಿಸಲಾಗಿದೆ.
ಮೂಲಗಳ ಪ್ರಕಾರ ಕಾಕ್ರಾಪರ್ ಅಣು ವಿದ್ಯುತ್ ಸ್ಥಾವರದಲ್ಲಿ 220 ಮೆಗಾವ್ಯಾಟ್ ಸಾಮರ್ಥ್ಯದ 2 ಘಟಕಗಳಿದ್ದು, ಇವುಗಳ ಪೈಕಿ ಒಂದು ಘಟಕದಲ್ಲಿ ಬೆಳಗ್ಗೆ 9ರ ಸುಮಾರಿಗೆ ಭಾರ ಜಲ ಸೋರಿಕೆ ಕಂಡುಬಂದಿದೆ. ಅಣು ರಿಯಾಕ್ಟರ್‌ನ ಮುಖ್ಯ ಭಾಗವನ್ನು ತಂಪುಗೊಳಿಸಲು ಭಾರಜಲ ಬಳಸಲಾಗುತ್ತದೆ. ಆದರೆ ವಿಕಿರಣ ಸೋರಿಕೆಯಾದ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಭಾರ ಜಲ ಸೋರಿಕೆಯಾಗುತ್ತಿದ್ದಂತೆಯೇ ಮುಂಜಾಗ್ರತಾ ಕ್ರಮವಾಗಿ ಅಣು ಸ್ಥಾವರದಲ್ಲಿ ತಾತ್ಕಾಲಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು.
ಬಳಿಕ ವಿಕಿರಣ ಸೋರಿಕೆಯಾಗಿಲ್ಲ ಎಂದು ಖಚಿತ ಪಡಿಸಿಕೊಂಡ ಅಧಿಕಾರಿಗಳು ಭಾರ ಜಲ ಸೋರಿಕೆಯಾಗುತ್ತಿದ್ದ ಭಾಗದಲ್ಲಿ ದುರಸ್ತಿ ಕಾರ್ಯ ನಡೆಸಿ ತುರ್ತು ಪರಿಸ್ಥಿತಿ ಹಿಂಪಡೆದರು. "ಅದೃಷ್ಟವಶಾತ್ ವಿಕಿರಣ ಸೋರಿಕೆಯಾಗಿಲ್ಲ. ನೌಕರರು ಸುರಕ್ಷಿತವಾಗಿದ್ದಾರೆ. ಆರಂಭದಲ್ಲಿ ತಾತ್ಕಾಲಿಕವಾಗಿ ಘೋಷಿಸಲಾಗಿದ್ದ ತುರ್ತು ಪರಿಸ್ಥಿತಿಯನ್ನು ಕೆಲ ಗಂಟೆಗಳ ಬಳಿಕ ಹಿಂಪಡೆಯಲಾಗಿದೆ ಎಂದು ಅಣು ಸ್ಥಾವರದ ಅಧಿಕಾರಿಗಳು ತಿಳಿಸಿದ್ದಾರೆ.
ಜಪಾನ್‌ನ ಫುಕುಶಿಮಾ ಅಣುಸ್ಥಾವರದಲ್ಲಿ ವಿಕಿರಣ ಸೋರಿಕೆ ದುರ್ಘಟನೆ ಸಂಭವಿಸಿ ಶುಕ್ರವಾರಕ್ಕೆ ಐದು ವರ್ಷ ತುಂಬಿದ್ದು, ಇದರ ನಡುವೆಯೇ ಗುಜರಾತ್ ನ ಕಾಕ್ರಾಪರ್ ಅಣು ವಿದ್ಯುತ್ ಸ್ಥಾವರದ ಒಂದು ಘಟಕದಲ್ಲಿ ಭಾರ ಜಲ ಸೋರಿಕೆಯಾಗಿರುವುದು ಸಾಕಷ್ಟು.
Advertisement