ಸವಿತಾ ಹಾಲಪ್ಪನವರ್ ಪ್ರಕರಣ: ಪರಿಹಾರದೊಂದಿಗೆ ಅಂತ್ಯ

ಕಾನೂನಿಗೆ ಕಟ್ಟುಬಿದ್ದು ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದ ಕನ್ನಡತಿ ಸವಿತಾ ಹಾಲಪ್ಪನವರ್ ಪ್ರಕರಣ ಐರ್ಲೆಂಡ್ ನ್ಯಾಯಾಲಯಾದಲ್ಲಿ ಪರಿಹಾರದ ಒಪ್ಪಂದದೊಂದಿಗೆ...
ಸವಿತಾ ಹಾಲಪ್ಪನವರ್
ಸವಿತಾ ಹಾಲಪ್ಪನವರ್

ನವದೆಹಲಿ: ಕಾನೂನಿಗೆ ಕಟ್ಟುಬಿದ್ದು ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದ ಕನ್ನಡತಿ ಸವಿತಾ ಹಾಲಪ್ಪನವರ್ ಪ್ರಕರಣ ಐರ್ಲೆಂಡ್ ನ್ಯಾಯಾಲಯಾದಲ್ಲಿ ಪರಿಹಾರದ ಒಪ್ಪಂದದೊಂದಿಗೆ ಮುಕ್ತಾಯವಾಗಿರುವುದಾಗಿ ತಿಳಿದುಬಂದಿದೆ.

ಸವಿತಾ ಸಾವು ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದ ಸವಿತಾ ಅವರ ಪತಿ ಪ್ರವೀಣ್ ಅವರು ಗಾಲ್ ವೇಯ ವಿಶ್ವವಿದ್ಯಾಲಯ ಆಸ್ಪತ್ರೆಯ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು. ಇದರಂತೆ ವಿಚಾರಣೆ ನಡೆಸಿರುವ ಅಲ್ಲಿನ ಹೈಕೋರ್ಟ್ ನ್ಯಾಯಮೂರ್ತಿ ಕೆವಿನ್ ಕ್ರಾಸ್ ಅವರು, ಒಪ್ಪಂದಂತೆ ಪರಿಹಾರ ಹಣವನ್ನು ನೀಡುವಂತೆ ಆದೇಶಿಸಿದ್ದರು.

17 ವಾರಗಳ ಗರ್ಭಿಣಿಯಾಗಿದ್ದ ಸವಿತಾ ಹಾಲಪ್ಪನವರ್ ಅವರು ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ 2012ರ ಅ.28 ರಂದು ಗಾಲ್ ವೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಗರ್ಭಪಾತ ಮಾಡಲು ಐರ್ಲೆಂಡ್ ನ ಕಾನೂನಿನಲ್ಲಿ ಅವಕಾಶ ಇಲ್ಲದಿರುವುದರಿಂದ ಸವಿತಾ ಅವರಿಗೆ ಅಲ್ಲಿನ ವೈದ್ಯರು ಗರ್ಭಪಾತ ಮಾಡಿಸಲು ಹಿಂದೇಟುಹಾಕಿದ್ದರು. ಈ ಕಾನೂನು ಕಟ್ಟುಬದ್ಧ ಸವಿತಾ ಅವರ ಸಾವಿಗೆ ಕಾರಣವಾಗಿತ್ತು. ಈ ಪ್ರಕರಣ ವಿಶ್ವದಾದ್ಯಂತ ಹಲವು ಆಕ್ರೋಶಗಳಿಗೆ ಕಾರಣವಾಗಿತ್ತು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com