ಬಜೆಟ್ ಅಧಿವೇಶನದಲ್ಲಿ ರೋಜಾ ಪ್ರವೇಶಕ್ಕೆ ನಕಾರ

ವಿಧಾನಸಭೆಯಿಂದ ಅಮಾನತುಗೊಂಡಿದ್ದ ವೈಎಸ್ ಆರ್ ಸಿ ಶಾಸಕಿ ಮತ್ತು ನಟಿ ರೋಜಾ ಅವರಿಗೆ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ...
ವೈಎಸ್ ಆರ್ ಸಿ ಶಾಸಕಿ ಮತ್ತು ನಟಿ ರೋಜಾ
ವೈಎಸ್ ಆರ್ ಸಿ ಶಾಸಕಿ ಮತ್ತು ನಟಿ ರೋಜಾ

ಹೈದರಾಬಾದ್: ವಿಧಾನಸಭೆಯಿಂದ ಅಮಾನತುಗೊಂಡಿದ್ದ ವೈಎಸ್ ಆರ್ ಸಿ ಶಾಸಕಿ ಮತ್ತು ನಟಿ ರೋಜಾ ಅವರಿಗೆ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ಸಹ ಇದೀಗ ವಿಧಾನಸಭೆ ಸ್ಪೀಕರ್ ಮಾತ್ರ ಇದಕ್ಕೆ ನಕಾರ ತೋರಿದ್ದಾರೆಂದು ತಿಳಿದುಬಂದಿದೆ.

ಈ ಹಿಂದೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆಂಬ ಕಾರಣಕ್ಕೆ ರೋಜಾ ಅವರನ್ನು 1 ವರ್ಷಗಳ ಕಾಲ ಅಮಾನತು ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದ ಕೆಲವು ದಿನಗಳ ಹಿಂದೆ ಹೈಕೋರ್ಟ್ ಆದೇಶವನ್ನು ಹೊರಡಿಸಿತ್ತು. ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಅವಕಾಶ ನೀಡಬೇಕೆಂದು ಹೇಳಿತ್ತು.

ಇದರಂತೆ ಇಂದು ನಡೆಯುತ್ತಿರುವ ಬಜೆಟ್ ಅಧಿವೇಶನದ ವೇಳೆ ನಟಿ ರೋಜಾ ಅವರು ವಿಧಾನಸಭೆಗೆ ಬಂದಿದ್ದಾರೆ. ಆದರೆ, ಸದನ ಪ್ರವೇಶ ಮಾಡುತ್ತಿದ್ದಂತೆ ಸ್ಥಳದಲ್ಲಿದ್ದ ಮಾರ್ಷಲ್ ಗಳು ಅವರನ್ನು ತಡೆದಿದ್ದಾರೆ. ರೋಜಾ ಅವರನ್ನು ಸದನದೊಳಗೆ ಬಿಡುವ ಕುರಿತಂತೆ ಸ್ಪೀಕರ್ ಆದೇಶ ನೀಡಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ರೋಜಾ ಅವರ ಪರವಕೀಲರನ್ನು ಸದನದೊಳಗೆ ಬಿಟ್ಟಿಲ್ಲ.

ಈ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ನಟಿ ರೋಜಾ ಹಾಗೂ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕರು ಕಪ್ಪು ಬಟ್ಟೆಯನ್ನು ಧರಿಸುವ ಮೂಲಕ ವಿಧಾನಸಭೆ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಈ ಸಂಬಂಧ ವಿರೋಧ ವ್ಯಕ್ತಪಡಿಸಿರುವ ವೈಎಸ್ ಆರ್ ಕಾಂಗ್ರೆಸ ಮುಖ್ಯಸ್ಥ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ತಮ್ಮ ನಿಲುವು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಆಂಧ್ರಪ್ರದೇಶ ಸ್ಪೀಕರ್ ಕೋಡೆಲಾ ಶಿವಪ್ರಸಾದ ರಾವ್ ಅವರು, ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ವಿಧಾನಸಭೆಗೆ ಇದೆ. ಈ ಬಗ್ಗೆ ಸೋಮವಾರ ಸದನದಲ್ಲಿ ಚರ್ಚೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com