ಮುಳುಗುತ್ತಿದ್ದ ಹಡಗಿನಿಂದ 8 ಮಂದಿಯನ್ನು ರಕ್ಷಿಸಿದ ಭಾರತೀಯ ಕರಾವಳಿ ಕಾವಲು ಪಡೆ

ಮುಳುಗುತ್ತಿದ್ದ ಸೆಲ್ವಮಾತಾ ಹಡಗಿನಿಂದ 8 ಮಂದಿಯನ್ನು ರಕ್ಷಿಸುವಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ...
ಕರಾವಳಿ ಕಾವಲು ಪಡೆ
ಕರಾವಳಿ ಕಾವಲು ಪಡೆ
Updated on

ಕೋಳಿಕ್ಕೊಡ್(ಕೇರಳ): ಮುಳುಗುತ್ತಿದ್ದ ಸೆಲ್ವಮಾತಾ ಹಡಗಿನಿಂದ 8 ಮಂದಿಯನ್ನು ರಕ್ಷಿಸುವಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಸೆಲ್ವಮಾತಾ ಹಡಗು ಕೇರಳದ ಬೀಪೋರ್​ನಿಂದ ಲಕ್ಷ ದ್ವೀಪಕ್ಕೆ ಹೊರಟಿತ್ತು. ಆದರೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಹಡಗು ಮುಳುಗುತ್ತಿರುವುದನ್ನು ಗಮನಿಸಿದ ಕರಾವಳಿ ಕಾವಲು ಪಡೆ ಸಿಬ್ಬಂದಿ ಹಡಗಿನಲ್ಲಿದ್ದ 8 ಮಂದಿಯನ್ನು ರಕ್ಷಿಸಿದ್ದಾರೆ.

ಸದ್ಯ 8 ಮಂದಿಯು ಆರೋಗ್ಯದಿಂದ ಇದ್ದಾರೆ. ಯಾವುದೇ ಸಮಸ್ಯೆಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com