26/11 ಮುಂಬೈ ದಾಳಿ: ಹೆಡ್ಲಿ ಪಾಟಿ ಸವಾಲು ಪ್ರಕ್ರಿಯೆ ಆರಂಭ
26/11 ಮುಂಬೈ ದಾಳಿ: ಹೆಡ್ಲಿ ಪಾಟಿ ಸವಾಲು ಪ್ರಕ್ರಿಯೆ ಆರಂಭ

26/11 ಮುಂಬೈ ದಾಳಿ: ಹೆಡ್ಲಿ ಪಾಟಿ ಸವಾಲು ಪ್ರಕ್ರಿಯೆ ಆರಂಭ

26/11ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಅಮೆರಿಕ ಮೂಲದ ಪಾಕಿಸ್ತಾನ ಭಯೋತ್ಪಾದಕ ಡೆವಿಡ್ ಹೆಡ್ಲಿಯ ಪಾಟಿ ಸವಾಲು ಪ್ರಕ್ರಿಯೆ ಬುಧವಾರ ಆರಂಭವಾಗಿದೆ...

ಮುಂಬೈ:  26/11ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಅಮೆರಿಕ ಮೂಲದ ಪಾಕಿಸ್ತಾನ ಭಯೋತ್ಪಾದಕ ಡೆವಿಡ್ ಹೆಡ್ಲಿಯ ಪಾಟಿ ಸವಾಲು ಬುಧವಾರ ಆರಂಭವಾಗಿದೆ.

ಹೆಡ್ಲಿ ಪಾಟಿ ಸವಾಲು ಪ್ರಕ್ರಿಯೆ ಮುಂಬೈ ನಲ್ಲಿ ನಡೆಯುತ್ತಿದ್ದು, ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ. ವಕೀಲ ಅಬ್ದುಲ್ ವಾಹೆಬ್ ಖಾನ್ ಅವರು ಪಾಟಿ ಸವಾಲು ನಡೆಸುತ್ತಿದ್ದಾರೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್  ಆಗಿರುವ ಉಜ್ವಲ್ ನಿಖಾಮ್, ಮುಂಬೈ ಅಪರಾಧ ವಿಭಾಗದ ಮುಖ್ಯಸ್ಥ ಅತುಲ್ ಕುಲ್ಕರ್ಣಿ ಅವರು ವಿಚಾರಣೆ ಪ್ರಕ್ರಿಯೆಯಲ್ಲಿ ಹಾಜರಿದ್ದಾರೆಂದು ತಿಳಿದುಬಂದಿದೆ.

ಬಂಧನಕ್ಕೊಳಗಾಗಿರುವ ಡೇವಿಡ್ ಹೆಡ್ಲಿಯನ್ನು ಈ ಹಿಂದೆ ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿತ್ತು. ಶಿಕಾಗೋ ಜೈಲಿನಿದಂ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈ ನ ಸೆಷನ್ಸ್ ನ್ಯಾಯಾಲಯ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಹೆ್ಲಿ ತಪ್ಪೊಪ್ಪಿಗೆ ನೀಡಿದ್ದ. ಅಲ್ಲದೆ, ಜಿಹಾದಿ, ಲಷ್ಕರ್, ಹಫೀಜ್ ಸಯೀದ್ ಸೇರಿದಂತೆ ಅನೇಕ ರಹಸ್ಯಗಳನ್ನು ಹೊರ ಹಾಕಿದ್ದ. 26/11 ಮುಂಬೈ ದಾಳಿಗೂ ಮುನ್ನ ಭಾರತಕ್ಕೆ 8 ಬಾರಿ ಭೇಟಿ ನೀಡಿದ್ದೆ. ಲಷ್ಕರ್ ಇ-ತೊಯ್ಬಾ ಹಿಂಬಾಲಕನಾಗಿ ಸಂಪರ್ಕ ಹೊಂದಿದ್ದೆ ಎಂದು ಹೇಳಿಕೊಂಡಿದ್ದ.

Related Stories

No stories found.

Advertisement

X
Kannada Prabha
www.kannadaprabha.com