

ಹೈದರಾಬಾದ್: ಹೈದರಾಬಾದ್ ಗೆ ಭೇಟಿ ನೀಡಿರುವ ಜೆಎನ್ ಯು ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯ ಕುಮಾರ್ ಮೇಲೆ ಆತನ ಮೇಲೆ ಶೂ ಎಸೆದಿರುವ ಘಟನೆ ನಡೆದಿದೆ.
ಸುದರಯ್ಯ ವಿಜ್ಞಾನ ಕೇಂದ್ರಂ ನಲ್ಲಿ ಕನ್ಹಯ್ಯ ಕುಮಾರ್ ಸಾಂವಿಧಾನಿಕ ಹಕ್ಕುಗಳೆಂಬ ವಿಷಯದ ಬಗ್ಗೆ ಭಾಷಣ ಮಾಡಬೇಕಿತ್ತು. ಈ ವೇಳೆ ಭಾಷಣಕ್ಕೆ ಅಡ್ಡಿ ಪಡಿಸಿದ ಇಬ್ಬರು ಯುವಕರು ಕನ್ಹಯ್ಯ ಕುಮಾರ್ ಮೇಲೆ ಶೂ ಎಸೆದಿದ್ದಾರೆ. ಶೂ ಎಸೆದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದು, ಪವನ್ ರೆಡ್ಡಿ ಹಾಗು ನರೇಶ್ ಕುಮಾರ್ ಬಂಧಿತರು.
ಶೂ ಎಸೆದ ಇಬ್ಬರು ಯುವಕರನ್ನು ಎಸ್ಎಫ್ಐ ಕಾರ್ಯಕರ್ತರು ಥಳಿಸಿದ್ದಾರೆಂಬ ಆರೋಪವೂ ಕೇಳಿಬಂದಿದೆ. ಶೂ ಎಸೆದ ಘಟನೆ ನಂತರ ವಿಚಾರ ಸಂಕಿರಣದಲ್ಲಿ ಕನ್ಹಯ್ಯ ಕುಮಾರ್ ಭಾಷಣ ಮಾಡಿದ್ದಾನೆ.