ರಾಜಧಾನಿ ದೆಹಲಿ ಮೇಲೆ ಉಗ್ರರ ಕೆಂಗಣ್ಣು: ಹೆಚ್ಚಿದ ಭದ್ರತೆ

ಬ್ರುಸೆಲ್ಸ್ ಮೇಲೆ ನಡೆದ ಉಗ್ರರ ದಾಳಿ ಇಡೀ ವಿಶ್ವವನ್ನು ಬೆಚ್ಚಿಬೀಳಿಸಿತ್ತು. ಇದೀಗ ರಾಜಧಾನಿ ದೆಹಲಿ ಮೇಲೂ ಕೆಂಗಣ್ಣು ಬೀರಿರುವ ಉಗ್ರರು ಹೋಳಿ ಹಬ್ಬ ಆಚರಣೆಯಂದು ವಿಧ್ವಂಸಕ ಕೃತ್ಯವೆಸಗಲು...
ರಾಜಧಾನಿ ದೆಹಲಿ ಮೇಲೆ ಉಗ್ರರ ಕೆಂಗಣ್ಣು: ಹೆಚ್ಚಿದ ಭದ್ರತೆ
ರಾಜಧಾನಿ ದೆಹಲಿ ಮೇಲೆ ಉಗ್ರರ ಕೆಂಗಣ್ಣು: ಹೆಚ್ಚಿದ ಭದ್ರತೆ

ನವದೆಹಲಿ: ಬ್ರುಸೆಲ್ಸ್ ಮೇಲೆ ನಡೆದ ಉಗ್ರರ ದಾಳಿ ಇಡೀ ವಿಶ್ವವನ್ನು ಬೆಚ್ಚಿಬೀಳಿಸಿತ್ತು. ಇದೀಗ ರಾಜಧಾನಿ ದೆಹಲಿ ಮೇಲೂ ಕೆಂಗಣ್ಣು ಬೀರಿರುವ ಉಗ್ರರು ಹೋಳಿ ಹಬ್ಬ ಆಚರಣೆಯಂದು ವಿಧ್ವಂಸಕ ಕೃತ್ಯವೆಸಗಲು ಯೋಜನೆ ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿರುವುದಾಗಿ ಗುರುವಾರ ತಿಳಿದುಬಂದಿದೆ.

ಭಾರತದಾದ್ಯಂತ ಇಂದು ಹೋಳಿಹಬ್ಬ ಆಚರಣೆ ಮಾಡುಲಾಗುತ್ತಿದ್ದು, ಈ ವೇಳೆ ಜನಿನಬಿಡ ಪ್ರದೇಶಗಳು, ಹೋಟೆಲ್, ಆಸ್ಪತ್ರೆಗಳನ್ನು ಗುರಿಯಾಗಿರಿಸಿಕೊಂಡಿರುವ ಉಗ್ರರು ಇದೀಗ ದೆಹಲಿ, ಪಂಜಾಬ್ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯವೆಸಗಲು ಯೋಜನೆ ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಕೇಂದ್ರಕ್ಕೆ ಎಚ್ಚರಿಕೆ ನೀಡಿರುವುದಾಗಿ ತಿಳಿದುಬಂದಿದೆ.

ಗುಪ್ತಚರ ಇಲಾಖೆ ಮಾಹಿತಿಯನ್ವಯ ಈಗಾಗಲೇ ಕೇಂದ್ರ ಸರ್ಕಾರ ದೆಹಲಿ, ಪಂಜಾಬ್ ಹಾಗೂ ಅಸ್ಸಾಂ ರಾಜ್ಯ ಸರ್ಕಾರಗಳಿಗೆ ಭದ್ರತೆ ಹೆಚ್ಚಿಸುವಂತೆ ಸೂಚನೆ ನೀಡಿದ್ದು, ಸೂಚನೆಯನ್ವಯ ಇದೀಗ ಎಲ್ಲಾ ರಾಜ್ಯಗಳಲ್ಲೂ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ಮಾಜಿ ಪಾಕಿಸ್ತಾನ ಯೋಧನೊಬ್ಬ ಕಳೆದ ವಾರ ಗಡಿಯನ್ನು ದಾಟಿ ಭಾರತಕ್ಕೆ ಬಂದಿದ್ದು, 6 ಉಗ್ರರೊಂದಿಗೆ ಪಂಜಾಬ್ ನಲ್ಲಿ ತಲೆಮರೆಸಿಕೊಂಡಿದ್ದಾರೆ. ಹೋಳಿ ಆಚರಣೆ ಹಿನ್ನೆಲೆಯಲ್ಲಿ ಈ ಉಗ್ರರು ದೆಹಲಿಯಲ್ಲಿ ವಿಧ್ವಂಸಕ ಕೃತ್ಯವೆಸಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿರುವ ಅಧಿಕಾರಿಗಳು ಈಗಾಗಲೇ ದೆಹಲಿಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಿದ್ದು, ಮುಂಜಾಗ್ರತಾ ಕ್ರಮವಾಗಿ 2,500 ಅರೆ ಸೇನಾಪಡೆಯನ್ನು ನಿಯೋಜಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com