ಬಾಲ್ಯದಿಂದಲೂ ಭಾರತ ಕಂಡರೆ ದ್ವೇಷ, ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಉಗ್ರನಾದೆ: ಹೆಡ್ಲಿ

ಬಾಲ್ಯದಿಂದಲೂ ಭಾರತವನ್ನು ಕಂಡರೆ ನನಗೆ ದ್ವೇಷ. ಹೀಗಾಗಿ ಭಾರತ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ನಾನು ಉಗ್ರನಾದೆ. ಇದೇ ಕಾರಣಕ್ಕೆ ಲಷ್ಕರ್-ಇ-ತೊಯ್ಬಾ ಉಗ್ರ...
ಡೇವಿಡ್ ಹೆಡ್ಲಿ
ಡೇವಿಡ್ ಹೆಡ್ಲಿ
Updated on

ಮುಂಬೈ: ಬಾಲ್ಯದಿಂದಲೂ ಭಾರತವನ್ನು ಕಂಡರೆ ನನಗೆ ದ್ವೇಷ. ಹೀಗಾಗಿ ಭಾರತ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ನಾನು ಉಗ್ರನಾದೆ. ಇದೇ ಕಾರಣಕ್ಕೆ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಸೇರಿದ್ದೆ ಎಂದು 26/11ರ ಮುಂಬೈ ದಾಳಿಯ ಆರೋಪಿ ಡೇವಿಡ್ ಹೆಡ್ಲಿ ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾನೆ.

ಸದ್ಯ ಅಮೆರಿಕ ಜೈಲಿನಲ್ಲಿರುವ ಹೆಡ್ಲಿ 26/11ರ ಮುಂಬೈ ದಾಳಿಯ ಕುರಿತಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ಮಾತನಾಡಿದ್ದಾನೆ. ಈ ವೇಳೆ 1971ರಲ್ಲಿ ನಾನು ಓದುತ್ತಿದ್ದ ಶಾಲೆಯ ಮೇಲೆ ಭಾರತೀಯ ಸೇನೆಯ ಹೆಲಿಕಾಫ್ಟರ್ ಗಳು ಬಾಂಬ್ ಹಾಕಿದ್ದವು. ಇದೇ ಕಾರಣಕ್ಕೆ ಬಾಲ್ಯದಿಂದಲೂ ಭಾರತವನ್ನು ದ್ವೇಷಿಸಲು ಶುರುಮಾಡಿದೆ. ಭಾರತಕ್ಕೆ ಹೆಚ್ಚು ಹಾನಿ ಮಾಡಬೇಕು ಎಂದು ಹಾತೊರೆಯುತ್ತಿದ್ದಾಗ ನಾನು ಲಷ್ಕರ್ ಇ ತೊಯ್ಬಾ ಉಗ್ರ ಸೇರಿದೆ ಎಂದು ಹೆಡ್ಲಿ ಹೇಳಿಕೊಂಡಿದ್ದಾನೆ.

ಹೌದು ನಾನೊಬ್ಬ ಅಮಾನವೀಯ, ಅಮಾನುಷ, ಭೀಕರವಾದ ವ್ಯಕ್ತಿ. ನಾನೊಬ್ಬ ದುಷ್ಟ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಅದೇ ಕಾರಣಕ್ಕೆ ಮುಂಬೈ ದಾಳಿ ನಡೆಸಿ ಅಪಾರ ಸಾವು ನೋವಿಗೆ ಕಾರಣನಾದೆ ಎಂದು ಹೇಳಿಕೊಂಡಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com