ದೋಷಪೂರಿತ ನಾಯಕರನ್ನು ತೆಗೆದುಹಾಕಿ: ಮಮತಾಗೆ ಸವಾಲು ಹಾಕಿದ ಅಮಿತ್ ಶಾ

ಭ್ರಷ್ಟಾಚಾರದಲ್ಲಿ ತೊಡಗಿಕೊಂಡು ಲಂಚ ಸ್ವೀಕರಿಸುವತ್ತಿದ್ದಾಗ ಸಿಕ್ಕಿಹಾಕಿಕೊಂಡಿದ್ದ ದೋಷಪೂರಿತ ನಾಯಕರನ್ನು ಪಕ್ಷದಿಂದ ಹೊರಹಾಕಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ...
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ಕೋಲ್ಕತಾ: ಭ್ರಷ್ಟಾಚಾರದಲ್ಲಿ ತೊಡಗಿಕೊಂಡು ಲಂಚ ಸ್ವೀಕರಿಸುವತ್ತಿದ್ದಾಗ ಸಿಕ್ಕಿಹಾಕಿಕೊಂಡಿದ್ದ ದೋಷಪೂರಿತ ನಾಯಕರನ್ನು ಪಕ್ಷದಿಂದ ಹೊರಹಾಕಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಚಿಯವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ಸವಾಲು ಹಾಕಿದ್ದಾರೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾ ಅವರು, ಮಮತಾ ಬ್ಯಾನರ್ಜಿಯವರು ಈ ಹಿಂದೆ ಭ್ರಷ್ಟಾಚಾರದ ಹಿಂದೆ ಹೋರಾಟ ಮಾಡುವುದಾಗಿ ಹೇಳಿದ್ದರು. ಆದರೆ, ಮಮತಾ ಅವರ ನೈತಿಕತೆಯನ್ನು ಅವರ ಪಕ್ಷದ ನಾಯಕರೇ ಲಂಚ ಪಡೆಯುವ ಮೂಲಕ ಬದಿಗೆ ಎಸೆದಿದ್ದಾರೆ. ಮಮತಾ ಅವರಿಗೆ ಅವರ ಪಕ್ಷದ ನಾಯಕರು ಮುಗ್ಧರು ಎನ್ನುವುದೇ ಆದರೆ, ನಾರದ ಕುಟುಕು ಕಾರ್ಯಾಚರಣೆಯನ್ನು ಸಿಬಿಐ ತನಿಖೆಗೆ ನೀಡಲಿ ಎಂದು ಹೇಳಿದ್ದಾರೆ.

ಇದೇ ವೇಳೆ ನಾರದ ಹಗರಣದಲ್ಲಿ ಬಿಜೆಪಿ ಹಾಗೂ ಟಿಎಂಸಿ ನಡುವೆ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪಗಳ ವಿರುದ್ಧ ಕಿಡಿಕಾರಿರುವ ಅವರು, ಕೆಲವು ಮಾಧ್ಯಮಗಳು ಇಷ್ಟೆಲ್ಲಾ ಆಗುತ್ತಿದ್ದರೂ ಬಿಜೆಪಿ ಏನು ಮಾಡುತ್ತಿದೆ ಎಂದು ಪ್ರಶ್ನೆ ಹಾಕುತ್ತಿದೆ. ಇದರಲ್ಲಿ ಬಿಜೆಪಿ ಏನು ಮಾಡಲು ಸಾಧ್ಯ? ಭ್ರಷ್ಟಾಚಾರ ನಡೆಸಿದ್ದವರು, ಲಂಚ ಸ್ವೀಕರಿಸಿದ್ದವರು ಟಿಎಂಸಿ ನಾಯಕರು. ಕ್ರಮ ಕೈಗೊಳ್ಳಬೇಕಾದ್ದರು ಮಮತಾ ಬ್ಯಾನರ್ಜಿಯವರು. ನೈತಿಕ ಹೊಣೆಯನ್ನು ಹೊತ್ತು ದೋಷಪೂರಿತ ನಾಯಕರನ್ನು ಪಕ್ಷದಿಂದ ಮಮತಾ ಅವರು ಹೊರಹಾಕಬೇಕು ಎಂದು ಹೇಳಿದ್ದಾರೆ.

ಪ್ರಕರಣ ಲೋಕಸಭೆಯಲ್ಲಿದಿದ್ದರೆ ನಾವು ಇದನ್ನು ನೀತಿ ಸಮಿತಿ ಒಪ್ಪಿಸುತ್ತಿದ್ದೆವು. ಲೋಕಸಭೆಯಲ್ಲಿ ನಮಗೆ ಬಹುಮತವಿದೆ. ಆದರೆ, ರಾಜ್ಯಸಭೆಯಲ್ಲಿ ನಮಗೆ ಬಹುಮತವಿಲ್ಲ. ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳಿಗೆ ರಾಜ್ಯಸಭೆಯಲ್ಲಿ ಬಹುಮತವಿದೆ. ಪ್ರಕರಣವನ್ನು ಅವರೇಕೆ ನೀತಿ ಸಮಿತಿ ಒಪ್ಪಿಸಬಾರದು ಎಂದು ಪ್ರಶ್ನಿಸಿದ್ದಾರೆ.

ನಾರದ ಪ್ರಕರಣದಲ್ಲಿ ಬಿಜೆಪಿ ಮಧ್ಯಪ್ರವೇಶಿಸಿ ಸಿಡಿಗಳನ್ನೇಕೆ ವಶಕ್ಕೆ ಪಡೆಯುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಪ್ರಕರಣದಲ್ಲಿ ಒಂದು ಒಕ್ಕೂಟದ ರಚನೆಯಿದೆ. ಮಮತಾ ಅವರು ಎಷ್ಟು ಬೇಗ ಪ್ರಕರಣವನ್ನು ಸಿಬಿಐಗೆ ಒಪ್ಪುಸುತ್ತಾರೆಯೋ ಆಗ ಮಾತ್ರ ಸಿಡಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com