
ಚೆನ್ನೈ: ಬ್ರುಸೆಲ್ಸ್ ನಲ್ಲಿ ಕೆಲವು ದಿನಗಳ ಹಿಂದಷ್ಟೇ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿರುವ ತಮಿಳುನಾಡು ಮೂಲದ ಇನ್ಫೋಸಿಸ್ ಉದ್ಯೋಗಿ ರಾಘವೇಂದ್ರ ಗಣೇಶನ್ ಅವರ ಸಾವಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಮಂಗಳವಾರ ಸಂತಾಪ ಸೂಚಿಸಿದ್ದಾರೆ.
ಮಾರ್ಚ್ 22ರಂದು ಬ್ರಸಲ್ಸ್ ವಿಮಾನ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿ 35ಕ್ಕೂ ಹೆಚ್ಚು ಮಂದಿ ಬಲಿಯಾಗಿ 300 ಅಧಿಕ ಮಂದಿ ಗಾಯಗೊಂಡಿದ್ದರು. ಸ್ಫೋಟದ ನಡೆದ ಬಳಿಕ ರಾಘವೇಂದ್ರನ್ ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿತ್ತು. ಇದರಂತೆ ಸ್ಫೋಟದಲ್ಲಿ ಗಣೇಶನ್ ಕೂಡ ಸಾವನ್ನಪ್ಪಿದ್ದಾರೆಂದು ಬ್ರುಸೆಲ್ಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ಖಚಿತ ಪಡಿಸಿತ್ತು.
ಇದೀಗ ಗಣೇಶನ್ ಅವರ ಸಾವಿಗೆ ಜಯಲಲಿತಾ ಅವರು ಸಂತಾಪ ಸೂಚಿಸಿದ್ದು, ತಮಿಳುನಾಡು ಜಾಗತಿಕ ಸಮುದಾಯದಲ್ಲಿ ಗಣೇಶನ್ ಅವರು ಶ್ರಮ ಜೀವಿಯಾಗಿ ದುಡಿಯುತ್ತಿದ್ದರು. ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು ಗಣೇಶನ್ ಅವರ ಸಾವು ನಿಜಕ್ಕೂ ದುರಂತ ಎಂದು ಹೇಳಿದ್ದಾರೆ.
Advertisement