
ನವದೆಹಲಿ: ಕೋಲ್ಕತಾದಲ್ಲಿ ಗುರುವಾರ ಸಂಭವಿಸಿದ ಫ್ಲೈಓವರ್ ಕುಸಿತ ದುರಂತ ನಡೆದ ಘಟನಾ ಸ್ಥಳಕ್ಕೆ ಶನಿವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.
ಫ್ಲೈ ಓವರ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮಾಹಿತಿ ಪಡೆದುಕೊಂಡಿರುವ ರಾಹುಲ್ ಗಾಂಧಿಯವರು ನಾಳೆ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆಂದು ಹೇಳಲಾಗುತ್ತಿದ್ದು, ಯಾವ ಸಮಯಕ್ಕೆ ಭೇಟಿ ನೀಡಲಿದ್ದಾರೆಂಬುದು ನಿರ್ಧಾರವಾಗಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ಉತ್ತರ ಕೊಲ್ಕತ್ತಾದ ಬಾಬಾ ಬಜಾರ್‌ನಲ್ಲಿರುವ ಹಳೆಯ ಗಣೇಶ್ ಟಾಕೀಸ್ (ಗಿರೀಶ್ ಪಾರ್ಕ್) ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ವಿವೇಕಾನಂದ ಫ್ಲೈಓವರ್ ಕುಸಿದು ಬಿದ್ದಿತ್ತು. ಫ್ಲೈ ಓವರ್ ಕುಸಿದ ಪರಿಣಾಮ ಸೇತುವೆ ಕೆಳಗಿದ್ದ ಹಲವು ಸುಮಾರು 24 ಮಂದಿ ಸಾವನ್ನಪ್ಪಿ, ಹಲವರು ಅವಶೇಷಗಳಿಡಿ ಸಿಲುಕಿಕೊಂಡಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು 90ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿದ್ದರು. ಇದರಂತೆ ಇಂದು ರಕ್ಷಣಾ ಕಾರ್ಯಾಚರಣೆ ಸಂಪೂರ್ಣಗೊಂಡಿದೆ ಎಂದು ಹೇಳಿರುವ ಅಧಿಕಾರಿಗಳು ಅವಶೇಷಗಳಡಿ ಯಾರೂ ಇಲ್ಲ ಎಂದು ಹೇಳಿದ್ದಾರೆ.
Advertisement