ಫ್ರಾನ್ಸ್, ಅಮೆರಿಕ ವೈಮಾನಿಕ ದಾಳಿಗೆ ಇಸೀಸ್ ನ ಬಾಂಬ್ ತಯಾರಿಕಾ ಪ್ರದೇಶ ಸಂಪೂರ್ಣ ಧ್ವಂಸ!

ಫ್ರಾನ್ಸ್ ಹಾಗೂ ಅಮೆರಿಕ ಇಸೀಸ್ ಮೇಲೆ 2 ಪ್ರತ್ಯೇಕ ದಾಳಿ ನಡೆಸಿದ್ದು ಇರಾಕ್ ನಲ್ಲಿರುವ ಇಸ್ಲಾಮಿಕ್ ಭಯೋತ್ಪಾದಕರ ಆಯಕಟ್ಟಿನ ತಾಣವನ್ನು ಧ್ವಂಸಗೊಳಿಸಿದೆ.
ವೈಮಾನಿಕ ದಾಳಿ
ವೈಮಾನಿಕ ದಾಳಿ

ಬಾಗ್ಧಾದ್: ಫ್ರಾನ್ಸ್ ಹಾಗೂ ಅಮೆರಿಕ ಇಸೀಸ್ ಮೇಲೆ 2 ಪ್ರತ್ಯೇಕ ದಾಳಿ ನಡೆಸಿದ್ದು ಇರಾಕ್ ನಲ್ಲಿರುವ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಆಯಕಟ್ಟಿನ ತಾಣವನ್ನು ಧ್ವಂಸಗೊಳಿಸಿದೆ.
ಏ.29 -30 ರಂದು ಅಮೆರಿಕ, ಫ್ರಾನ್ಸ್ ನಡೆಸಿರುವ ವಾಯು ದಾಳಿಯಲ್ಲಿ ಇಸೀಸ್ ಉಗ್ರರ ಆಯಕಟ್ಟಿನ ತಾಣ ಧ್ವಸಗೊಂಡಿದೆ ಎಂದು ಫ್ರೆಂಚ್ ರಕ್ಷಣಾ ಸಚಿವಾಲಯ ತಿಳಿಸಿದೆ. ಬೃಹತ್ ಪ್ರಮಾಣದಲ್ಲಿ ಬಾಂಬ್, ಆತ್ಮಹತ್ಯಾ ದಾಳಿಗಳಿಗೆ ವಾಹನಗಳನ್ನು ತಯಾರಿಸುತ್ತಿದ್ದ ಪ್ರದೇಶದ ಮೇಲೆ ವೈಮಾನಿಕ ದಾಳಿ ನಡೆದಿರುವುದರಿಂದ ಇಸೀಸ್ ನ ಬಾಂಬ್ ತಯಾರಿಕಾ ಘಟಕ ಸಂಪೂರ್ಣ ಧ್ವಂಸಗೊಂಡಿದೆ.
ಇರಾಕ್-ಸಿರಿಯಾದ ಗಡಿಯಲ್ಲಿದ್ದ ಪ್ರದೇಶದಲ್ಲಿ ಇಸೀಸ್ ಉಗ್ರರು ಬಾಂಬ್ ತಯಾರಿಕೆ ನಡೆಸುತ್ತಿದ್ದರು, ಈ ಪ್ರದೇಶದ ಮೇಲೆಯೇ ವೈಮಾನಿಕ ದಾಳಿ ನಡೆಸಲಾಗಿದ್ದು, ಸಂಪೂರ್ಣವಾಗಿ ನಾಶ ಮಾಡಲು ಎರಡು ಪ್ರತ್ಯೇಕ ದಾಳಿ ನಡೆಸಬೇಕಾಯಿತು ಎಂದು ಫ್ರೆಂಚ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಇಸೀಸ್ ಉಗ್ರರ ವಿರುದ್ಧ ದಾಳಿ ನಡೆಸಲು ಅಮೆರಿಕ ಜೊತೆ ಕೈಜೋಡಿಸಿದ ಮೊದಲ ಯುರೋಪಿಯನ್ ರಾಷ್ಟ್ರ ಫ್ರಾನ್ಸ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com