ರಾಮದೀಪ್ ಸಿಂಗ್(15) ಮೃತಪಟ್ಟ ದುರ್ದೈವಿ. ಬುಲೆಟ್ ಲೋಡೆಡ್ ಗನ್ ತೆಗೆದುಕೊಂಡು ಹಣೆಗೆ ಇಟ್ಟು ಸೆಲ್ಫಿ ತೆಗೆದುಕೊಳ್ಳುವ ವೇಳೆ ಆಕಸ್ಮಿಕವಾಗಿ ಟ್ರಿಗರನ್ನು ಒತ್ತಿದ ಪರಿಣಾಮ ಆತನ ಹಣೆಗೆ ಗುಂಡು ತಗುಲಿದೆ. ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತಲೆಗೆ ತೀವ್ರವಾದ ಗಾಯವಾಗಿದ್ದರಿಂದ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ಭೂಷಣ್ ತಿಳಿಸಿದ್ದಾರೆ.