ರೈಲು ಮೂಲಕ ಬರ ಪೀಡಿತ ಪ್ರದೇಶಗಳಿಗೆ ನೀರು: ಕೇಂದ್ರದ ನೆರವು ತಿರಸ್ಕರಿಸಿದ ಉತ್ತರ ಪ್ರದೇಶ ಸರ್ಕಾರ

ಉತ್ತರ ಪ್ರದೇಶದ ಬುಂದೇಖಂಡ್ ನ ಬರ ಪೀಡಿತ ಪ್ರದೇಶಗಳಿಗೆ ರೈಲಿನ ಮೂಲಕ ನೀರು ಪೂರೈಸುವ ಕೇಂದ್ರ ಸರ್ಕಾರದ ನೆರವನ್ನು ಉತ್ತರ ಪ್ರದೇಶ ಸರ್ಕಾರ ತಿರಸ್ಕರಿಸಿದೆ.
ರೈಲು ಮೂಲಕ ಬರ ಪೀಡಿತ ಪ್ರದೇಶಗಳಿಗೆ ನೀರು: ಕೇಂದ್ರದ ನೆರವು ತಿರಸ್ಕರಿಸಿದ ಉತ್ತರ ಪ್ರದೇಶ ಸರ್ಕಾರ

ಲಖನೌ: ಉತ್ತರ ಪ್ರದೇಶದ ಬುಂದೇಲ್ ಖಂಡ್ ನ ಬರ ಪೀಡಿತ ಪ್ರದೇಶಗಳಿಗೆ ರೈಲಿನ ಮೂಲಕ ನೀರು ಪೂರೈಸುವ ಕೇಂದ್ರ ಸರ್ಕಾರದ ನೆರವನ್ನು ಉತ್ತರ ಪ್ರದೇಶ ಸರ್ಕಾರ ತಿರಸ್ಕರಿಸಿದೆ.

ಮಹಾರಾಷ್ಟ್ರದ ಲಾತೂರ್ ನಂತೆಯೇ ಬುಂದೇಲ್ ಖಂಡ್ ನ ಬರ ಪೀಡೀತ ಪ್ರದೇಶಗಳಿಗೂ ರೈಲು ಮೂಲಕ ನೀರು ಪೂರೈಸುವ ಪ್ರಸ್ತಾವನೆ ನೀಡಿತ್ತು ಕೇಂದ್ರ ರೈಲ್ವೆ ಇಲಾಖೆ. ಆದರೆ ಈ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಉತ್ತರ ಪ್ರದೇಶ, ಮರಾಠ್ ವಾಡಾದಲ್ಲಿ ಉಂಟಾದ ಪರಿಸ್ಥಿತಿ ಬುಂದೇಲ್ ಖಂಡ್ ನಲ್ಲಿ ಉಂಟಾಗಿಲ್ಲ. ಅಲ್ಲಿ ಕೇಂದ್ರದ ಮಧ್ಯಪ್ರವೇಶದ ಅಗತ್ಯವಿತ್ತು. ಆದರೆ ಇಲ್ಲಿ ಆ ಪರಿಸ್ಥಿತಿ ಇಲ್ಲವಾದ್ದರಿಂದ ಕೇಂದ್ರ ಸರ್ಕಾರದ ಮಧ್ಯಪ್ರವೇಶ ಅಗತ್ಯವಿಲ್ಲ ಎಂದು ಹೇಳಿದೆ. ಬುಂದೇಲ್ ಖಂಡ್ ನಲ್ಲಿ ನೀರಿನ ಬೇಡಿಕೆಯನ್ನು ಪೂರೈಸಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com