ಮದ್ಯ ನಿಷೇಧ ಎಫೆಕ್ಟ್; ನಕಲಿ ಮದ್ಯ ಸೇವಿಸಿ ಕಣ್ಣು ಕಳೆದುಕೊಂಡ ಬಿಹಾರದ ವ್ಯಕ್ತಿ

ಬಿಹಾರ ಸರ್ಕಾರದ ಮದ್ಯ ನಿಷೇಧ ಅಲ್ಲಿನ ಮದ್ಯ ವ್ಯಸನಿಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ನಕಲಿ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬನ ತನ್ನ ಕಣ್ಣುಗಳನ್ನೇ ಕಳೆದುಕೊಂಡ ಘಟನೆ ನಡೆದಿದೆ...
ಕಣ್ಣು ಕಳೆದುಕೊಂಡ ರಾಜ್ ಕುಮಾರ್ ಗುಪ್ತ (ಎಎನ್ ಐ ಚಿತ್ರ)
ಕಣ್ಣು ಕಳೆದುಕೊಂಡ ರಾಜ್ ಕುಮಾರ್ ಗುಪ್ತ (ಎಎನ್ ಐ ಚಿತ್ರ)

ಗಯಾ: ಬಿಹಾರ ಸರ್ಕಾರದ ಮದ್ಯ ನಿಷೇಧ ಅಲ್ಲಿನ ಮದ್ಯ ವ್ಯಸನಿಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ನಕಲಿ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬನ ತನ್ನ ಕಣ್ಣುಗಳನ್ನೇ ಕಳೆದುಕೊಂಡ ಘಟನೆ  ನಡೆದಿದೆ.

ಬಿಹಾರದ ಗಯಾ ಮೂಲದ ವ್ಯಕ್ತಿ ರಾಜ್ ಕುಮಾರ್ ಗುಪ್ತಾ ಎಂಬಾತ ನಕಲಿ ಮದ್ಯ ಸೇವಿಸಿ ಇದೀಗ ಆಸ್ಪತ್ರೆ ಪಾಲಾಗಿದ್ದು, ಆತನ ಕಣ್ಣುಗಳು ಗಂಭೀರ ಸ್ವರೂಪದಲ್ಲಿ ಹಾನಿಗೀಡಾಗಿವೆ ಎಂದು  ವೈದ್ಯರು ತಿಳಿಸಿದ್ದಾರೆ. ಬಿಹಾರದಲ್ಲಿ ಪಂಚಾಯಿತಿ ಚುನಾವಣೆ ನಡೆಯುತ್ತಿದ್ದು, ಈ ವೇಳೆ ರಾಜ್ ಕುಮಾರ್ ಗುಪ್ತಾ ರಾಜಕೀಯ ಪಕ್ಷಗಳು ಹಂಚಿದ್ದ ನಕಲಿ ಮದ್ಯವನ್ನು ಸೇವಿಸಿ  ಅನಾರೋಗ್ಯಕ್ಕೀಡಾಗಿದ್ದ. ಕೂಡಲೇ ಆತನನ್ನು ಮಗದ್ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದರೆ ಇದೀಗ ರಾಜ್ ಕುಮಾರ್ ಗುಪ್ತನ ಕಣ್ಣುಗಳು ಹೋಗಿವೆ ಎಂದು ವೈದ್ಯರು ತಿಳಿಸಿದ್ದಾರೆ.  ಮೂಲಗಳ ಪ್ರಕಾರ ಬಿಹಾರದ ಗಯಾದಲ್ಲಿ ಈ ರೀತಿ ರಾಜಕೀಯ ಪಕ್ಷಗಳು ಹಂಚಿದ್ದ ನಕಲಿ ಮಧ್ಯ  ಸೇವಿಸಿ ಈ ಹಿಂದೆ ಇಬ್ಬರು ಜೀವವನ್ನೇ ಕಳೆದುಕೊಂಡ ಕುರಿತು ವರದಿಯಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com